ಅಯೋಧ್ಯೆಯಲ್ಲಿ 2.77 ಎಕರೆ ಭೂಮಿಯ ಹಕ್ಕು ಹಿಂದೂಗಳಿಗೆ ಸೇರಿದ್ದಾಗಿದೆ ಮತ್ತು ಮಸೀದಿ ನಿರ್ಮಾಣಕ್ಕೆ 5 ಎಕರೆಗಳ ಪ್ರತ್ಯೇಕ ಜಾಗವನ್ನು ನೀಡಬೇಕು ಎಂದು ಅಯೋಧ್ಯೆಯ ವಿವಾದಕ್ಕೆ ಒಂದು ಅಂತ್ಯ ಹಾಡಿದೆ ಸುಪ್ರೀಂ ಕೋರ್ಟ್ ಐತಿಹಾಸಿಕಾ ತೀರ್ಪು ಪ್ರಕಟಿಸುವ ಮೂಲಕ. ಆದೇಶದ ಪ್ರಮುಖ ಅಂಶಗಳ ಬಗ್ಗೆ ಒಂದು ನೋಟ ಹರಿಸೋಣ ಬನಿ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮಸೀದಿ ನಿರ್ಮಾಣಕ್ಕೆ ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು ಎಂದು ತೀರ್ಮಾನ ನೀಡಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕಿದ್ದ, ಮಂದಿರ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಸೇರಿದೆ. ದೇವಸ್ಥಾನ ನಿರ್ಮಾಣ ಮಾಡಲು ಒಂದು ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗೆ ಮಾತ್ರವೇ ಅಧಿಕಾರ. ಬಾಬ್ರಿ ಮಸೀದಿ ಭೂಮಿಯ ಮಾಲೀಕತ್ವವು ಶಿಯಾ ವಕ್ಫ್ ಬೋರ್ಡ್ ಗೆ ಒಳಪಟ್ಟಿರುವುದಿಲ್ಲ ಮತ್ತು ಅದಕ್ಕೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಬಾಬ್ರಿ ಮಸೀದಿ ನಿರ್ಮಾಣ ಮಾಡಿದವರು ಬಾಬರ್ ಕಮಾಂಡರ್ ಮೀರ್ ಬಾಕಿ.

ಇಲ್ಲಿ ಹಿಂದೂ ದೇವಾಲಯ ನಾಶದ ಬಗ್ಗೆ ಸಾಕ್ಷ್ಯವಿಲ್ಲ. 2 ನೇ ಶತಮಾನದಲ್ಲಿ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದ್ದು, ಈ ವಿಚಾರದಲ್ಲಿ ಕೇವಲ ಪುರಾತತ್ವ ಇಲಾಖೆಯ ಸಾಕ್ಷಿಯನ್ನು ಮಾತ್ರವೇ ಅವಲಂಬಿಸಲು ಸಾಧ್ಯವಿಲ್ಲ‌‌. ಅದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಅವಿವಾದಿತ ಎಂದಿದೆ ಸುಪ್ರೀಂ ಕೋರ್ಟ್. ರಾಮನ ಮೂರ್ತಿ ಇಟ್ಟ ವಿಚಾರದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಾದವನ್ನು ಮಾನ್ಯ ಮಾಡಿದ್ದು, 1949ರಲ್ಲಿ ರಾಮನ ಮೂರ್ತಿ ಇಡಲಾಗಿತ್ತು ಹಾಗೂ 1856 ರವರೆಗೆ ನಮಾಜ್ ಮಾಡಲಾಗಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ.‌

ಇನ್ನು ಮಸೀದಿಯ ಕೆಳಗಡೆ ಹಿಂದೂ ರಚನೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೆ ಈ ವಿವಾದಿತ ಸ್ಥಳದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಬ್ರಿಟೀಷರು ಆ ಜಾಗವನ್ನು ಪ್ರತ್ಯೇಕ ಮಾಡಿ ಇಲ್ಲಿ ಬೇಲಿ ನಿರ್ಮಾಣ ಮಾಡಿಸಿದ್ದರು. ಅದರ ಪರಿಣಾಮವಾಗಿ ಮಸೀದಿಯ ಒಳಗೆ ಮುಸ್ಲಿಮರು, ಹೊರಗೆ ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರು ಎಂದು ವಿವರಸಿದೆ ಸುಪ್ರೀಂ ಕೋರ್ಟ್. ಇನ್ನು ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದ್ದು, ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ ಎಂದು ಹೇಳಿದೆ ಸುಪ್ರೀಂ ಕೋರ್ಟ್.

ಬಾಬ್ರಿ ಮಸೀದಿ ಧ್ವಂಸವಾಗಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಈ ಹಿಂದೆ ಈ ವಿಚಾರದಲ್ಲಿ ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ನೀಡಿದ ತೀರ್ಪು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ ಹಾಗೂ ನ್ಯಾಯಾಧೀಶರ ಮುಂದೆ ಕೂಡಾ ಎಲ್ಲಾ ಧರ್ಮಗಳು ಒಂದೇ ಎಂದು ಹೇಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here