ಅಯೋಧ್ಯೆ ರಾಮ ಜನ್ಮ ಭೂಮಿ ಮಂದಿರ ನಿರ್ಮಾಣ ಕಾರ್ಯಕ್ಕೆ ನಾಳೆ ಚಾಲನೆ ನೀಡುವಾಗಲೇ ಕಾಂಗ್ರೆಸ್ ನಾಯಕರು ನೀಡುವ ಹೇಳಿಕೆಗಳು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ವಿಚಾರದಲ್ಲಿ ಮಾತನಾಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ರಾಮನ ದೇವಸ್ಥಾನ ಕಟ್ಟಡದ ಕೀಲಿಯನ್ನು ರಾಜೀವ್ ಗಾಂಧಿ ಅವರು ತೆರೆಸದೇ ಇದ್ದಿದ್ದರೆ ಇಂದು ರಾಮ ಮಂದಿರ ಇರುತ್ತಿರಲಿಲ್ಲ ಎಂದು ಹೇಳಿದ್ದು, ರಾಮ ಮಂದಿರ ನಿರ್ಮಾಣ ಅಂದೇ ಆರಂಭವಾಯಿತು ಎಂದಿದ್ದಾರೆ. ಅಲ್ಲದೆ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ರಾಜೀವ್ ಗಾಂಧಿಯವರ ಕನಸು ಕೂಡಾ ಆಗಿತ್ತು ಎಂದು ಹೇಳಿದ್ದಾರೆ.

ರಾಜೀವ್ ಗಾಂಧಿಯವರೇನಾದರೂ ಇಂದು ಇದ್ದಿದ್ದರೆ, ಅವರಷ್ಟು ಬೇರೆ ಯಾರೂ ಕೂಡಾ ಸಂತಸ ಪಡುತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ.‌ ಕಮಲ್ ನಾಥ್ ಅವರು ಇಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಹನುಮಾನ ಚಾಲಿಸಾ ಪಠಣ, ರಾಮ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ ನಂತರ ಮಾದ್ಯಮಗಳ ಮುಂದೆ ಮಾತನಾಡಿ, ಶ್ರೀ ರಾಮನು ಪ್ರತಿಯೊಬ್ಬರಲ್ಲೂ ಇದ್ದಾ‌ನೆ ಎಂದು ನುಡಿದಿದ್ದಾರೆ.‌ ಇನ್ನು ರಾಮಮಂದಿರ ‌ನಿರ್ಮಾಣಕ್ಕೆ ಮಧ್ಯಪ್ರದೇಶ ಕಾಂಗ್ರೆಸ್​ನಿಂದ 11 ಬೆಳ್ಳಿ ಇಟ್ಟಿಗೆ ನೀಡುವುದಾಗಿ ಅವರು ಹೇಳಿದ್ದಾರೆ.‌

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here