ರಾನು ಮಂಡಾಲ್ ಯಾರಿಗೆ ತಿಳಿದಿಲ್ಲ ಹೇಳಿ? ಆಕೆ ರೈಲ್ವೆ ಸ್ಟೇಷನ್ ನಲ್ಲಿ ಹಾಡು ಹಾಡುತ್ತಾ, ಅದನ್ನು ವಿಡಿಯೋ‌ ಮಾಡಿದ ಒಬ್ಬಾತ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿ, ಇರುಳು ಕಳೆದು ಹಗಲಾಗುವ ವೇಳೆಗೆ ಸ್ಟಾರ್ ಆಗಿ ಬಿಟ್ಟಳು ರಾನು ಮಂಡಲ್. ಲತಾ ಮಂಗೇಶ್ಕರ್ ಹಾಡಿದ್ದ ಹಾಡನ್ನು ಹಾಡಿದ ರಾನು ನ್ಯಾಷನಲ್ ಸೆನ್ಸೇಷನ್ ಆಗಿದ್ದು, ಅನಂತರ ಸಿನಿಮಾ ನಟ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಷಮಿಯಾ ತಮ್ಮ ಸಿನಿಮಾದಲ್ಲಿ ರಾನು ವಿಗೆ ಹಾಡಲು ಅವಕಾಶ ಕೊಟ್ಟು ಆಕೆಯನ್ನು ಸಿಂಗರ್ ಕೂಡಾ ಮಾಡಿ ಬಿಟ್ಟರು.

ಹೀಗೆ ಬಡತನದಿಂದ ಬಂದ ರಾನು ತನ್ನ ಕಂಠದಿಂದ ಪಡೆದ ಅವಕಾಶವನ್ನು ಎಲ್ಲರೂ ಮೆಚ್ಚಿ ಆಕೆಯನ್ನು ಹೊಗಳಿದರು. ಆದರೆ ಈಗ ಅದೇ ಜನರು ತಮ್ಮ ಅಸಮಾಧಾನವನ್ನು ಹೊರ ಹಾಕುವಂತ ವರ್ತನೆಯನ್ನು ರಾನು ತೋರುತ್ತಿದ್ದು, ಆಕೆಗೆ ತಾನು ಸೆಲೆಬ್ರಿಟಿ ಎಂಬ ಹೆಮ್ಮೆ ಬಂದಂತಿದೆ ಎನ್ನುವ ಹಾಗಿದೆ ಆಕೆಯ ವರ್ತನೆ. ಕೆಲವು ದಿನಗಳ ಹಿಂದೆ ಅಂಗಡಿಯೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ರಾನು ವನ್ನು ಮುಟ್ಟಿ ಮಾತನಾಡಿಸಿ, ಸೆಲ್ಫಿ ಕೇಳಿದ್ದಕ್ಕೆ ರಾನು ಕೋಪಿಸಿಕೊಂಡು ಕೂಗಾಡಿದ ವಿಡಿಯೋ ವೈರಲ್ ಆಗಿತ್ತು.

ಈಗ ಅಂತಹುದೇ ಇನ್ನೊಂದು ಘಟನೆ ನಡೆದಿದೆ. ಮಾಧ್ಯಮದವರು ರಾನು ಅವರನ್ನು ಆಕೆಯ ಯಶಸ್ಸಿನ ಬಗ್ಗೆ ಪ್ರಶ್ನಿಸುವಾಗ, ರಾನು ತನ್ನ ಬ್ಯಾಗಿನಿಂದ ಏನೋ ತೆಗೆದುಕೊಂಡು ತಿನ್ನುತ್ತಾ ಮಾಧ್ಯಮದವರು ಬಳಿಕ ಅಲ್ಲಿ ಇಲ್ಲಿ ನೋಡುತ್ತಾ ಮಾಧ್ಯಮದವರತ್ತ ನೋಡುತ್ತಾ, ನೀವು ಹೇಳಿದ್ದು ನನಗೆ ಕೇಳಿಸಲಿಲ್ಲ ಎಂದು ಉತ್ತರ ನೀಡಿದ್ದು, ಈ ವಿಡಿಯೋ ನೋಡಿದ ಜನರು ರಾನು ವರ್ತನೆಯ ಕುರಿತಾಗಿ ತಮ್ಮ ಆಕ್ಷೇಪವನ್ನು, ಅಸಮಾಧಾನವನ್ನು ಹೊರಹಾಕಿದ್ದಾರೆ.

 

View this post on Instagram

Kya se kya hogaye dekhte dekhte 🙇 #ranumondal

A post shared by Our Vadodara (@clickers_of_vadodara) on

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here