ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಯಶಸ್ಸಿನ ಹಾದಿ ಹಿಡಿದು ಟಾಲಿವುಡ್ ಗೆ ಜಿಗಿದು, ಅಲ್ಲಿ ಕೂಡಾ ಯಶಸ್ಸು ಪಡೆಯುತ್ತಿರುವ ಸಕ್ಸ್​ಸ್​ ಫುಲ್ ನಟಿ ಹುಡುಗಿ ರಶ್ಮಿಕಾ ಮಂದಣ್ಣ ಅವರು ಏನೇ ಮಾಡಿದರೂ ಅದು ಟ್ರೋಲ್ ಆಗುತ್ತದೆ. ಸದಾ ಒಂದಲ್ಲಾ ಒಂದು ವಿಷಯಕ್ಕೆ ಟ್ರೋಲ್ ಆಗುವ ರಶ್ಮಿಕಾ ಇದೀಗ ಅದರ ವಿರುದ್ಧ ದನಿ ಎತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತನಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಿರುಕುಳ ಆಗುತ್ತಿದೆ ಎಂದು ಒಂದು ಭಾವನಾತ್ಮಕ ಪೋಸ್ಟನ್ನು ತಮ್ಮ ಇನ್​ ಸ್ಟಾಗ್ರಾಮ್​ನಲ್ಲಿ ಹಾಕುವ ಮೂಲಕ ತಮ್ಮ ಅಳಲನ್ನು ಹೊರಹಾಕಿದ್ದಾರೆ.

ರಶ್ಮಿಕಾ ಅವರು , ಕೆಲ ಕಿಡಿಗೇಡಿಗಳು ನನ್ನ ವಿರುದ್ಧ ಕೆಟ್ಟ, ಕೆಟ್ಟದಾಗಿ ಪೊಸ್ಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಾ, ಇದೇ ರೀತಿಯ ಪೋಸ್ಟ್ ನ್ನು ಮಾಡಿ ಉದಾಹರಿಸಿ ರಶ್ಮಿಕಾ ಅವರು, ಇನ್​ ಸ್ಟಾಗ್ರಾಮ್​ನಲ್ಲಿ ಹಾಕಿದ್ದಾರೆ. ಅವರು ಸೇ ನೋ ಟು ಸೋಷಿಯಲ್ ಮೀಡಿಯಾ ಹೆರಾಸ್ಮೆಂಟ್ ಎನ್ನುವ ಹ್ಯಾಷ್ ಟ್ಯಾಗ್​ಮೂಲಕ ನಟಿ ಪೋಸ್ಟ್ ಮಾಡಿದ್ದಾರೆ. ಸೆಲೆಬ್ರಿಟಿ ಅಂದ ಮಾತ್ರಕ್ಕೆ ನಿಮ್ಮ ಮನಸ್ಸಿಗೆ ಬಂದಂತೆ ಮಾತನಾಡುಬಹುದು ಎಂದ ಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡುವ ಮೂಲಕ ತನ್ನ ವಿರುದ್ಧ ಟ್ರೋಲ್ ಮಾಡುವವರ ಮೇಲೆ ಕಿಡಿ ಕಾರಿದ್ದಾರೆ.

ಅದೇ ಸಂದರ್ಭದಲ್ಲಿ ಅವರು ಬೇಕಾದರೆ ನನ್ನ ಕೆಲಸದ ಬಗ್ಗೆ ಏನಾದರೂ ಮಾತನಾಡಿ, ಆದರೆ ನಮ್ಮ ಕುಟುಂಬ ಬಗ್ಗೆ ಮಾತನಾಡಬೇಡಿ. ಜನರು ಮೊದಲು ಒಬ್ಬರನ್ನೊಬ್ಬರು ಗೌರವಿಸುವುದನ್ನು ಕಲಿಯಬೇಕಾಗಿದೆ ಎಂದು ಟ್ರೋಲ್ ಮಾಡುವವರ ವಿರುದ್ಧ ರಶ್ಮಿಕಾ ಮಂದಣ್ಣ ಗರಂ ಆಗಿದ್ದಾರೆ. ತಮ್ಮ ಪೋಸ್ಟ್ ಮೂಲಕ ಟ್ರೋಲಿಗರ ಬಗ್ಗೆ ತಮ್ಮ ಅಸಮಾಧಾನ ಹಾಗೂ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here