ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ‌ ಚಿತ್ರದ ಮೂಲಕ ಚಿರಪರಿಚಿತರಾದ ನಟಿ‌ ರಷ್ಮಿಕಾ ಮಂದಣ್ಣ. ನಂತರ ತೆಲುಗು ಚಿತ್ರರಂಗದಲ್ಲಿ ಸಹ ಜನಪ್ರಿಯತೆ ಪಡೆದ ಈ ನಟಿ ಈಗ ಸದ್ದಿಲ್ಲದೇ ಮತ್ತೊಂದು ಉತ್ತಮ ಸಮಾಜ ಸೇವೆ ಕೆಲಸದ ಮೂಲಕ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಹಸಿದವರ ಪಾಲಿಗೀಗ ಅನ್ನ ನೀಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ತಾವೇ ಸ್ವತಃ ರಸ್ತೆ ಬದಿ ನಿಂತು ಊಟ ಉಣಬಡಿಸಿ ಮಾನವೀಯತೆ ಮೆರೆದಿದ್ದಾರೆ. ಬಿಡುವಿಲ್ಲದ ಸಿನಿಮಾ ಕೆಲಸಗಳ ನಡುವೆ ರಶ್ಮಿಕಾ ಜನೋಪಕಾರಿ ಕೆಲಸಗಳನ್ನೂ ಮಾಡ್ತಿದ್ದಾರೆ ಅನ್ನೋದಕ್ಕೆ ಇದೊಂದು ನಿರ್ದಶನ ಸಾಕು ಅಂತ ಅನಿಸುತ್ತೆ. ರಶ್ಮಿಕಾ ರಸ್ತೆ ಬದಿಯಲ್ಲಿ ಹಸಿದವರಿಗೆ ಊಟ ನೀಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ನಿಂತು ಒಂದಿಷ್ಟು ಮಂದಿಗೆ ರಶ್ಮಿಕಾ ಕೈಯಾರೆ ಊಟ ಬಡಿಸಿ ಪ್ರೀತಿ ತೋರಿದ್ದಾರೆ. ರಶ್ಮಿಕಾ ಅವರ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿವೆ. ರಶ್ಮಿಕಾ ಅವರ ಫ್ಯಾನ್ಸ್ ಈ ಬಗ್ಗೆ ಟ್ಟೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿರುವ ರಶ್ಮಿಕಾ ಈ ಫೋಟೋಗಳು ಹೇಗೆ ಸಿಕ್ಕವು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕೆಲಸ ಮಾಡುವುದು ನನಗೆ ಖುಷಿಯ ಕೆಲಸವಾಗಿದೆ ಎಂದಿದ್ದು

ಈ ಫೋಟೋಗಳು ಎಲ್ಲಿ ಸಿಕ್ಕವೋ!? ಬಿಸಿಲಲ್ಲಿ ಕುಳಿತುಕೊಳ್ಳುತ್ತಿದ್ದ ಈ ಜನರನ್ನು ಡೈಲಿ ನೋಡ್ತಾ ಇದ್ದೆ. ಇವ್ರ ಮನೆಯಲ್ಲಿ ಒಬ್ಬರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇವ್ರಿಗೆ ಏನಾದ್ರು ಸಹಾಯ ಮಾಡ್ಬೇಕು ಅನ್ನೋದು ನನ್ನಾಸೆ. ಅದ್ರಿಂದ ಈ ಚಿಕ್ಕ ಕೆಲಸ ಮಾಡಿದ್ದೇನೆ ಅಂದಿದ್ದಾರೆ. ಆದ್ರೆ, ಎಲ್ಲಿ ಮಾಡಿದ್ದು, ಆ ಜನ ಯಾರು ಅಂತಾ ಮಾತ್ರ ಅವರು ಹೇಳಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here