ಇಡೀ ದೇಶದಲ್ಲಿ ಒಂದೇ ರೀತಿಯ ರೇಷನ್ ಕಾರ್ಡ್ ಇದ್ದರೆ ಬಹಳ ಉಪಯೋಗಕಾರಿ ಎನಿಸುವುದಲ್ಲವೇ? ಆಗ ಏನೂ ತೊಂದರೆ ಇರುವುದಿಲ್ಲ, ಒಂದು ಪಕ್ಷ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆ ಹೋದಾಗ ಅಲ್ಲಿ ಮತ್ತೆ ಹೊಸ ರೇಷನ್ ಕಾರ್ಡಿಗಾಗಿ ಪರದಾಡೋ ಕಷ್ಟ ಇರಲ್ಲ. ಒಂದೇ ದೇಶದಲ್ಲಿ ಇದ್ದರೂ ಊರಿಂದ ಊರಿಗೆ, ನಗರದಿಂದ ನಗರಕ್ಕೆ ಹೀಗೆ ಹೋದಾಗ ಇರೋ ರೇಷನ್ ಕಾರ್ಡನ್ನು ಸರಿಯಾಗಿ ಬಳಸೋಕೆ ಆಗದೆ ಪರದಾಡಬೇಕು. ಆದರೆ ಏಕರೂಪದ ರೇಷನ್ ಕಾರ್ಡ್ ಇದ್ದರೆ ಈ ರೀತಿ ವಲಸೆ ಹೋಗುವ ಜನರಿಗೆ ಬಹಳ ಅನುಕೂಲ ಅನ್ನೋದ್ರಲ್ಲಿ ಅನುಮಾನ ಇಲ್ಲ. ಕೆಲವು ರಾಜ್ಯಗಳಲ್ಲಿ ಉದಾಹರಣೆಗೆ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಇನ್ನೂ ಹೆಚ್ಚು ಸಬ್ಸಿಡಿ ದರಗಳಲ್ಲಿ ಪಡಿತರವನ್ನು ನೀಡಲಾಗುತ್ತದೆ.

ಆದರೆ ಈ ಸೌಲಭ್ಯ ವಲಸೆ ಹೋಗುವವರಿಗೆ ಸಿಗುವುದಿಲ್ಲ. ಆದರೆ ಈಗ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಒಂದು ಆಲೋಚನೆ ಮಾಡುತ್ತಿದೆ ಕೇಂದ್ರ ಸರ್ಕಾರ‌. ಕೇಂದ್ರ ಸರ್ಕಾರದ ಈ ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯ. ಇದರ ಜೊತೆ ಜೊತೆಗೆ ದೇಶದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರಗಳ ಗಳ ಬಳಕೆ ಅವಶ್ಯಕತೆ ಇದ್ದು, ಅದನ್ನು ಅಳವಡಿಸಬೇಕಾಗುತ್ತದೆ. ಈ ಯಂತ್ರಗಳನ್ನು ಅಳವಡಿಸಲು 2020 ರ ಜೂನ್ 30 ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಕರ್ನಾಟಕ ಸೇರಿದಂತೆ ಇತರೆ 10 ರಾಜ್ಯಗಳಲ್ಲಿ ಇಂಥ ಸೌಲಭ್ಯವಿದ್ದು, ಕರ್ನಾಟಕದಲ್ಲಿ ರೇಷನ್ ಕಾರ್ಡ್ ಹೊಂದಿರುವವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ರೇಷನ್ ಪಡೆಯುವ ಅವಕಾಶ ಹೊಂದಿದ್ದಾರೆಯಾದರೂ ಅದನ್ನು ಸಮರ್ಪಕವಾಗಿ ಅಳವಡಿಸಿಕೊಂಡಿಲ್ಲ. ಆದರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಈ ಏಕರೂಪದ ರೇಷನ್ ಕಾರ್ಡ್ ಬಂದರೆ ಪರಿಹಾರ ಸಿಗಬಹುದು.‌ ಅಲ್ಲದೆ ವಲಸೆ ಹೋಗುವ ಜನರಿಗೆ ಒಮ್ಮೆ ರೇಷನ್ ಕಾರ್ಡ್ ಮಾಡಿಸಿದರೆ ಅವರು ದೇಶದೆಲ್ಲೆಡೆ ಎಲ್ಲಿ ಹೋದರೂ ದವಸ ಧಾನ್ಯಗಳಿಗೆ ಕಷ್ಟ ಪಡುವಂತಿರುವುದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here