ಶಿವಾಲಯಗಳು ಅಸಂಖ್ಯಾತ ಇವೆ ನಮ್ಮ ದೇಶದಲ್ಲಿ. ಈ ಆಲಯಗಳಲ್ಲಿ ಶಿವಶಂಕರನನ್ನು ಬಹಳ ಶ್ರದ್ಧೆಯಿಂದ ಆರಾಧನೆ ಮಾಡ್ತಾರೆ. ಆದ್ರೆ ಭಾರತದಲ್ಲೊಂದು ವಿಶೇಷ ಶಿವಾಲಯ ಇದೆ. ಇಲ್ಲಿನ ವಿಶೇಷ ಒಂದು ಕ್ಷಣ ಎಲ್ಲರಿಗೂ ಆಶ್ಚರ್ಯ ಉಂಟು ಮಾಡೋದ್ರಲ್ಲಿ ಅನುಮಾನಾನೇ ಇಲ್ಲ. ಕಾರಣ ಇದು ಶಿವಾಲಯ ಆದ್ರೂ, ಇಲ್ಲಿ ಮೊದಲ ಪೂಜೆ ನಡೆಯೋದು ರಾಕ್ಷಸ ರಾಜನಾಗಿದ್ದ ರಾವಣನಿಗೆ ಅಂದ್ರೆ ನಂಬಲೇಬೇಕು. ಮೊದಲ ಪೂಜೆ ರಾವಣನಿಗೆ ಯಾಕೆ? ಎಲ್ಲಿದೆ ಈ ದೇವಾಲಯ ಅನ್ನೋ ಪ್ರಶ್ನೆಗಳು ಈಗಾಗ್ಲೇ ನಿಮ್ಮ ಆಲೋಚನೆಗಳಲ್ಲಿ ಬಂದಿರಬಹುದು. ಅಂತ ವಿಶೇದ ದೇವಾಲಯದ ಬಗ್ಗೆ ತಿಳ್ಕೊಳ್ಳೋಣ ಬನ್ನಿ.

ಈ ದೇವಾಲಯವು ಉದಯಪುರದಿಂದ 80 ಕಿಮೀ ದೂರದಲ್ಲಿ ಆವಾರಗಢದ ಬೆಟ್ಟಗಳಲ್ಲಿದೆ ಈ ಶಿವ‌ಮಂದಿರ. ಈ ಮಂದಿರದ ಹೆಸರು ಕಮಲನಾಥ ಮಹಾದೇವ ಮಂದಿರ‌. ಪುರಾಣ ಕಥೆಗಳ ಪ್ರಕಾರ ಈ ಆಲಯವನ್ನು ಸ್ವಯಂ ಲಂಕಾಪತಿ ರಾವಣ ಸ್ಥಾಪನೆ ಮಾಡಿದನೆಂಬುದು ಪ್ರತೀತಿ. ಒಂದೊಮ್ಮೆ ಲಂಕಾಪತಿ ರಾವಣನು ಇಲ್ಲಿ ಮಹಾಶಿವನ ಆರಾಧನೆ ಮಾಡುತ್ತಾ, ತನ್ನ ಶಿರವನ್ನೇ ಮಹಾಶಿವನಿಗಾಗಿ ಕತ್ತರಿಸಿಕೊಂಡು, ಅಗ್ನಿ ಕುಂಡಕ್ಕೆ ಅರ್ಪಿಸಿದನು ಎಂದು ಹೇಳಲಾಗುತ್ತದೆ. ರಾವಣನು ಹೀಗೆ ಮಾಡಿದ ಆರಾಧನೆಗೆ ಸಾಕ್ಷಾತ್ ಮಹಾಶಿವನು ಮೆಚ್ಚಿ ಲಂಕಾಪತಿಗೆ ದರ್ಶನವನ್ನು ನೀಡಿದನು‌.

ತನ್ನ ಆರಾಧನೆಗಾಗಿ ತನ್ನ ಶಿರವನ್ನೇ ಅಗ್ನಿ ಕುಂಡಕ್ಕೆ ಆಹುತಿ ನೀಡಿದ ರಾವಣನ ಅಪರಿಮಿತ ಭಕ್ತಿಗೆ ಮೆಚ್ಚಿದ ಮಹಾಶಿವನು, ರಾವಣನನ್ನು ಬದುಕಿಸಿದ್ದು ಮಾತ್ರವಲ್ಲದೆ, ರಾವಣನ ನಾಭಿಯಲ್ಲಿ ಅಮೃತಕುಂಡವನ್ನು ಸ್ಥಾಪಿಸಿದನಂತೆ. ಇದು ಇಲ್ಲಿನ ಸ್ಥಳ ಪುರಾಣ. ರಾವಣನು ಶಿವನ ಆರಾಧನೆ ಮಾಡುವಾಗ ನೂರು ಕಮಲಗಳಿಂದ ಪೂಜೆ ಮಾಡುವಾಗ, ಬ್ರಹ್ಮದೇವನು ಒಂದು ಕಮಲ ಕಡಿಮೆ ಮಾಡಿದಾಗ, ಕಮಲದ ಬದಲಾಗಿ ರಾವಣನು ತನ್ನ ಶಿರವನ್ನೇ ಅರ್ಪಿಸಿದ್ದನು. ಅದಕ್ಕೆ ಈ ಆಲಯವನ್ನು ಕಮಲನಾಥ ಮಹಾದೇವ ಮಂದಿರ ಎನ್ನಲಾಗುತ್ತದೆ.
ಇಲ್ಲಿನ ಇನ್ನೊಂದು ಪ್ರತೀತಿ ಏನೆಂದರೆ ರಾವಣನ ಪೂಜೆ ಮಾಡದೆ, ಮಹಾಶಿವನ ಪೂಜೆ ಮಾಡಿದರೆ ಅದು ಸಫಲವಾಗುವುದಿಲ್ಲ ಎಂದು‌. ಅದಕ್ಕೆ ಮೊದಲು ರಾವಣನ ಆರಾಧನೆ ಮಾಡಿ, ಅನಂತರ ಶಿವನ ಪೂಜೆ ಮಾಡಲಾಗುವುದು‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here