ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಕಂಡಂತ ಅದ್ಭುತ ಪೊಲೀಸ್ ಆಫೀಸರ್ ಗಳೆಂದರೆ ಮೊದಲು ನೆನಪಿಗೆ ಬರುವ ಹೆಸರುಗಳೆಂದರೆ ಅಣ್ಣಾಮಲೈ ಮತ್ತು ರವಿ ಡಿ ಚನ್ನಣ್ಣನವರ್. ಈ ಇಬ್ಬರು ದಕ್ಷ ಅಧಿಕಾರಿಗಳಿಗೆ ನಮ್ಮ ನಾಡಿನಲ್ಲಿ ವಿಶೇಷ ಅಭಿಮಾನಿಗಳು ಸಹ ಇದ್ದಾರೆ. ರವಿ ಡಿ. ಚನ್ನಣ್ಣನವರ್ ಅವರಿಗೆ ಖಾಸಗಿ ಕಾರ್ಯಕ್ರಮದ ವೇಳೆ ಇತ್ತೀಚಿಗೆ ವಿದ್ಯಾರ್ಥಿಯೊಬ್ಬ ಕೇಳಿದ್ದ ಪ್ರಶ್ನೆಗೆ ನನ್ನ ಸ್ನೇಹಿತ ಕೆ.ಅಣ್ಣಾಮಲೈ  ನನಗಿಂತ ಅದ್ಭುತ ಆಫೀಸರ್ ಎಂದಿದ್ದ ಎಸ್​ಪಿ ರವಿ ಡಿ.ಚನ್ನಣ್ಣನವರ್​ ಅವರ ಉತ್ತರಕ್ಕೆ ಅಣ್ಣಾಮಲೈ ಟ್ವೀಟ್​ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತಿಚೆಗೆ ಖಾಸಗಿ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳಿದ ಎಸ್​ಪಿ ರವಿ ಡಿ. ಚನ್ನಣ್ಣನವರ್​ ಅವರಿಗೆ ವಿದ್ಯಾರ್ಥಿಯೋರ್ವ ಅಣ್ಣಾಮಲೈ ಹಾಗೂ ರವಿ ಡಿ. ಚನ್ನಣ್ಣನವರ್ ನಿಮ್ಮಿಬ್ಬರಲ್ಲಿ ಯಾರು ಅದ್ಭುತ ಆಫೀಸರ್ ಎಂದು ಪ್ರಶ್ನೆ ಕೇಳಿದ್ದ. ಈ ಪ್ರಶ್ನೆಗೆ ಚೆನ್ನಣ್ಣನವರ್ ಎಂದಿಗೂ ನನ್ನ ಸ್ನೇಹಿತ ಕೆ.ಅಣ್ಣಾಮಲೈ ಅದ್ಭುತ ಆಫೀಸರ್ ಎಂದಿದ್ದರು.

.ಸದ್ಯ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರತ ದೇಶದ ಸಿವಿಲ್​ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಶ್ರೇಷ್ಠರೇ. “ಎಲ್ಲಾ ಸರ್ವಶಕ್ತ ನದಿಗಳು ಕೊನೆಗೆ ಸೇರೋದು ಒಂದೇ ಜಾಗದಲ್ಲಿ”‌ ರವಿ ಡಿ.ಚನ್ನಣ್ಣನವರ್ ಸರ್ ನನ್ನ ಬಗ್ಗೆ ಹೀಗೆ ಹೇಳಿದ್ದು ಖುಷಿ ತಂದಿದೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿ, ರವಿ ಡಿ.ಚೆನ್ನಣ್ಣನವರ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here