ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದುಬಾರಿ ಎನಿಸುವ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಈಗಾಗಲೇ ಜಾರಿಯಾಗಿದ್ದು , ದಂಡದ ಭಯದಿಂದಾಗಿ ಈಗ ಬೈಕ್, ಕಾರುಗಳಿಗೆ ಅಗತ್ಯ ದಾಖಲೆಗಳು ಇಲ್ಲದೆ ಇರುವವರು ಅದನ್ನು ಮಾಡಿಸಲು ಮುಂದಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶದ ಪೋಲಿಸ್ ವರಿಷ್ಠರಾದ ರವಿ ಡಿ ಚೆನ್ನಣ್ಣನವರ್ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಡಿಎಲ್ ಪಡೆಯಲು ಕ್ಯಾಂಪ್ ಆಯೋಜನೆ ಮಾಡುವ ಒಂದು ಜನಾನುರಾಗಿ ನಿರ್ಧಾರವನ್ನು ಮಾಡಿದ್ದಾರೆ.

 

ಗ್ರಾಮೀಣ ಪ್ರದೇಶಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಓಡಾಡುವರ ಸಂಖ್ಯೆ ಹೆಚ್ಚಾಗಿದ್ದು, ಅದರ ಪರಿಹಾರಕ್ಕಾಗಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಡಿಎಲ್ ಕ್ಯಾಂಪನ್ನು ಇದೇ ತಿಂಗಳ 15 ರಿಂದ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೆ ಸಾರಿಗೆ ಇಲಾಖೆ ಕೂಡಾ ಇದಕ್ಕೆ ಸಮ್ಮತಿಯನ್ನು ಸೂಚಿಸಿದೆ ಎನ್ನಲಾಗಿದ್ದು, ಚಾಲನಾ ಪರವಾನಗಿ ಇಲ್ಲದಿರುವಂತಹ ವಾಹನ ಚಾಲಕರು ಸೂಕ್ತ ದಾಖಲೆಗಳೊಂದಿಗೆ ಡಿಎಲ್‌ ಕ್ಯಾಂಪ್‌ ನಡೆಯುವ ಆಗಮಿಸಿದರೆ, ಅವರಿಗೆ ಸ್ಥಳದಲ್ಲಿಯೇ ಚಾಲನಾ ಪರವಾನಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ರವಿ ಡಿ. ಚನ್ನಣ್ಣನವರ್ ಹೇಳಿದ್ದಾರೆ.

ಇದರಿಂದ ಡಿಎಲ್ ಇಲ್ಲದೆ ಸಂಚರಿಸಿದರೆ ವಿಧಿಸಲಾಗುವ 5000 ರೂ ಗಳ ದಂಡದ ಹೊರೆಯಿಂದ ವಾಹನ ಚಾಲಕರು ನಿರಾಳರಾಗಬಹುದಾಗಿದೆ. ರವಿ ಡಿ ಚೆನ್ನಣ್ಣನವರ್ ಅವರು ಆಯೋಜನೆ ಮಾಡಲು ಮುಂದಾಗಿರುವ ಈ ಡಿಎಲ್ ಕ್ಯಾಂಪ್ ಗಳ ಸದುಪಯೋಗ ಎಲ್ಲರೂ ಪಡೆದುಕೊಂಡರೆ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here