ರಾಜಕಾರಣಿಗಳು ಗ್ರಾಮ ವಾಸ್ತವ್ಯ ನಡೆಸುವುದು ಎಲ್ಲರಿಗೂ ತಿಳಿದ ವಿಷಯವೇ. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಗ್ರಾಮ ವಾಸ್ತವ್ಯ ಬಹಳಷ್ಟು ಸುದ್ದಿ ಮಾಡಿತ್ತು. ಅದರಿಂದ ಗ್ರಾಮಾಭಿವೃದ್ಧಿ, ಗ್ರಾಮೀಣ ಭಾಗಗಳ ಜನರ ಸಮಸ್ಯೆಗಳ ಕುರಿತಾಗಿ ತಿಳಿಯಲು, ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ ಎನ್ನಲಾಗಿತ್ತು. ಗ್ರಾಮ ವಾಸ್ತವ್ಯದ ಬಗ್ಗೆ ಪರ ವಿರೋಧ ನಿಲುವುಗಳು ಕೂಡಾ ವ್ಯಕ್ತವಾಗಿತ್ತು. ಈಗ ಇಂತಹುದೇ ಮತ್ತೊಂದು ಗ್ರಾಮ ವಾಸ್ತವ್ಯ ನಡೆದಿದೆ. ಆದರೆ ಈ ಗ್ರಾಮ ವಾಸ್ತವ್ಯ ಮಾಡಿದವರು ಯಾರೋ ಒಬ್ಬ ಮಂತ್ರಿಯಾಗಲೀ ಅಥವಾ ರಾಜಕಾರಣಿಯಲ್ಲ. ಬದಲಿಗೆ ಒಬ್ಬ ಪೊಲೀಸ್ ಅಧಿಕಾರಿ.

ಹೌದು, ಬೆಂಗಳೂರು ಗ್ರಾಮಾಂತರದ ಎಸ್.ಪಿ. ರವಿ. ಡಿ. ಚನ್ನಣ್ಣನವರ್ ನೆಲಮಂಗಲ ತಾಲೂಕಿನ ಅರೇಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಹೊಸದೊಂದು ಸಂಪ್ರದಾಯಕ್ಕೆ ಅಡಿಪಾಯವನ್ನು ಹಾಕಿದ್ದಾರೆ. ನಿನ್ನೆ ಇಸ್ಲಾಂ ಧರ್ಮೀಯರ ಪವಿತ್ರ ಹಬ್ಬ ಈದ್ ಮಿಲಾದ್ ಹಿನ್ನೆಲೆಯಲ್ಲಿ ಕೋಮು ಗಲಭೆ ಉಂಟಾಗಬಹುದೆಂಬ ಕಾರಣದಿಂದ, ಅದನ್ನು ತಡೆಯಲು ಮತ್ತು ಜನರಿಗೆ
ಜನರಿಗೆ ಪೊಲೀಸ್ ​​ವ್ಯವಸ್ಥೆ ಹತ್ತಿರವಾಗಬೇಕೆಂಬ ಒಂದೊಳ್ಳೆ ಉದ್ದೇಶದಿಂದ ರವಿ.ಡಿ.ಚೆನ್ನಣ್ಣನವರ್ ಅವರು ಇಂತಹುದೊಂದು ಈ ಗ್ರಾಮ ವಾಸ್ತವ್ಯ ನಡೆಸಿದ್ದಾರೆ.

ಗ್ರಾಮ ವಾಸ್ತವ್ಯದ ಸಮಯದಲ್ಲಿ ಗ್ರಾಮ ಸಭೆಯನ್ನು ನಡೆಸಿದ ಪೊಲೀಸ್ ಸೇವೆಗಳ ಬಗ್ಗೆ ಜನರಿಗೆ ಎಲ್ಲಾ ಮಾಹಿತಿಯನ್ನು ನೀಡಿದರು. ಗ್ರಾಮ ಸಭೆಯಲ್ಲಿ ನೆಲಮಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು. ಪೋಲಿಸ್ ಗ್ರಾಮ ವಾಸ್ತವ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆಯ ಮೊದಲ ಪ್ರಯತ್ನ ಇದಾಗಿದೆ. ಇಂತಹ ಒಂದು ಪ್ರಯತ್ನಕ್ಕೆ ಜನರು ಕೂಡಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here