ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅನ್ಯಾಯ ಕ್ರಮಗಳನ್ನು ಎದುರಿಸಲು ವೇಷ ಮರೆಸಿಕೊಂಡು ಹೋಗಿ ರಹಸ್ಯ ಕಾರ್ಯಾಚರಣೆಯನ್ನು ಮಾಡುವುದನ್ನು ಸಿನಿಮಾಗಳಲ್ಲಿ ನೋಡಿ ಜನ ಚಪ್ಪಾಳೆ ತಟ್ಟುತ್ತಾರೆ. ಆದರೆ ಅಂತಹುದೇ ಒಂದು ಸಾಹಸವನ್ನು ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ದಕ್ಷ ಪೋಲಿಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಕೂಡಾ ಮಾಡಿ ಇದೀಗ ಎಲ್ಲರ ಗಮನ ಸೆಳೆದಿರುವುದು ಮಾತ್ರವೇ ಅಲ್ಲದೇ, ಮೆಚ್ಚುಗೆಗೆ ಕೂಡಾ ಪಾತ್ರರಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಅತ್ತಿ ಬೆಲೆ ಚೆಕ್ ಪೋಸ್ಟ್ ನಲ್ಲಿ ಆರ್.ಟಿ.ಓ. ಅಧಿಕಾರಿಗಳ ಅಕ್ರಮದ ಸುಳಿವನ್ನು ಪತ್ತೆ ಹೆಚ್ಚಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ರವಿ.ಡಿ.ಚೆನ್ನಣ್ಣನವರ್ ಅವರು.

ಅತ್ತಿಬೆಲೆಯ ಚೆಕ್​ಪೋಸ್ಟ್​ನಲ್ಲಿ ತಮಿಳುನಾಡಿನ ಕಡೆಯಿಂದ ರಾಜ್ಯದೊಳಕ್ಕೆ ವರುವ ವಾಹನಗಳನ್ನು ತಡೆದು, ಅಲ್ಲಿ ಸಾರಿಗೆ ಅಧಿಕಾರಿಗಳಾದ ಕರಿಯಪ್ಪ ಮತ್ತು ಜಯಣ್ಣ ಎಂಬುವವರ ಕೈ ವಿವೇಕ್ ಎಂಬ ಹೆಸರಿನ ಹೋಮ್ ಗಾರ್ಡ್ ಸಿಬ್ಬಂದಿ ವಾಹನಗಳನ್ನ ನಿಲ್ಲಿಸಿ, ವಾಹನ ಚಾಲಕರಿಂದ ಹಣವನ್ನು ವಸೂಲಿ ಮಾಡುತ್ತಾ ಇದ್ದನು. ಅಲ್ಲದೆ ಅವರಿಗೆ ಟೆಂಪ್ರವರಿ ಪರವಾನಗಿ (ಪರ್ಮಿಟ್) ಎಂದ ನೆಪ ಒಡ್ಡಿ, ಪ್ರತಿಯೊಂದು ವಾಹನದಿಂದ 400 ರಿಂದ 500 ರೂಪಾಯಿ ಹಣವನ್ನು ಸಂಗ್ರಹಿಸಲಾಗುತ್ತಿತ್ತು. ಈ ಅಕ್ರಮವನ್ನು ತಡೆಯಲು ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ.ಡಿ.ಚೆನ್ನಣ್ಣನವರ್ ತಮ್ಮ ಯೋಜನೆ ರೂಪಿಸಿದ್ದಾರೆ.

ಲಾರಿ ಚಾಲಕನಾಗಿ ಮಾರುವೇಷದಲ್ಲಿ ಸ್ಥಳಕ್ಕೆ ಹೋದ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ ಚನ್ನಣ್ಣನವರ್ ಅವರು ಆರೋಪಿಗಳನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೋಮ್ ಗಾರ್ಡ್ ವಿವೇಕ್, ಆರ್​ಟಿಒ ಬ್ರೇಕ್ ಇನ್ಸ್​ಪೆಕ್ಟರ್​ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಬಂಧಿಸಲಾಗಿದ್ದು, ಇವರಿಂದ 12,350 ರೂಪಾಯಿ ವಶಪಡಿಸಲಾಗಿದೆ. ಇಬ್ಬರು ಬ್ರೇಕ್ ಇನ್ಸ್​ಪೆಕ್ಟರ್​ಗಳನ್ನ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಆದೇಶವನ್ನು ಹೊರಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here