ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರವನ್ನು ಪಡೆದ ನಂತರ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಯ ಪರ್ವ ಮುಂದುವರೆದಿದೆ‌. ಅದರ ಭಾಗವಾಗಿಯೇ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್​ ಸೇರಿದಂತೆ 10 ಐಪಿಎಸ್​ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಡಿಸಿಪಿ ರವಿ ಡಿ.ಚೆನ್ನಣ್ಣನವರ್, ಪಿ.ಹರಿಶೇಖರನ್, ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನೊಳಗೊಂಡಂತೆ 10 ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಐಪಿಎಸ್ ಅಧಿಕಾರಿಗಳ ಈ ವರ್ಗಾವಣೆಯ ಹಿಂದಿನ ಕಾರಣವೇನೆಂದು ತಿಳಿದಿಲ್ಲವಾದರೂ, ಮೈತ್ರಿ ಸರ್ಕಾರವಿದ್ದಾಗಲೂ ಇದೇ ರೀತಿ ವರ್ಗಾವಣೆಯ ಪರ್ವ ನಡೆದಿತ್ತು‌. ಈಗಲೂ ಅದು ಮುಂದುವರೆದಂತೆ ಕಂಡು ಬಂದಿದೆ.

ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ರವಿ.ಡಿ.ಚೆನ್ನಣ್ಣ ನವರ್ ಅವರನ್ನು ಈಗ ಬೆಂಗಳೂರು ಗ್ರಾಮಾಂತರಕ್ಕೆ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅವರು ಈ ಹಿಂದೆ ಶಿವಮೊಗ್ಗದಲ್ಲಿ ಎಸ್​ಪಿ ಆಗಿದ್ದರು. ಅಲ್ಲಿಂದ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಈಗ ವರ್ಗಾವಣೆ ಆಗಿರುವ ಐಪಿಎಸ್ ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದೆ.


ಡಾ.ಎ.ಪರಶಿವಮೂರ್ತಿ -ಎಡಿಜಿ ಮತ್ತು ಎಸಿಪಿ, ಅಪರಾಧ ವಿಭಾಗ, ಬೆಂಗಳೂರು ನಗರ

ಡಾ.ಎಂ.ಅಬ್ದುಲ್ ಸಲೀಂ -ಎಡಿಜಿಪಿ, ಆಡಳಿತ, ಬೆಂಗಳೂರು

ಡಾ.ಪಿ.ಎಸ್ ಹರ್ಷ -ಡಿಐಜಿ ಮತ್ತು ಆಯುಕ್ತರು, ಮಂಗಳೂರು ನಗರ

ಡಾ. ಬಿ.ಆರ್.ರವಿಕಾಂತೇಗೌಡ, ಡಿಐಜಿ ಮತ್ತು ಜಂಟಿ ಆಯುಕ್ತರು, ಟ್ರಾಫಿಕ್ ವಿಭಾಗ, ಬೆಂಗಳೂರು

ರವಿ ಡಿ ಚೆನ್ನಣ್ಣನವರ್ -ಎಸ್​ಪಿ, ಬೆಂಗಳೂರು ಗ್ರಾಮಾಂತರ

ಕುಲ್​ದೀಪ್​ ಕುಮಾರ್ ಆರ್.ಜೈನ್​-ಡಿಸಿಪಿ, ಕ್ರೈಂ

ಎಸ್​.ಗಿರೀಶ್-ಕಮಾಂಡೆಂಟ್​, ಕೆಎಸ್​​ಆರ್​ಪಿ 9ನೇ ಬೆಟಾಲಿಯನ್

ಬಿ.ದಯಾನಂದ್​-ಐಜಿಪಿ, ಅಪರಾಧ & ಆರ್ಥಿಕ ಅಪರಾಧಗಳ ತನಿಖಾ ದಳ

ಪಿ.ಹರಿಶೇಖರನ್​- ಐಜಿಪಿ, ಕೆಎಸ್​ಆರ್​ಪಿ..

ಅನುರಾಗ್ ಗಿರಿ-ಡಿಸಿಪಿ ಮಂಗಳೂರು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here