ಕರ್ನಾಟಕದ ಸಿಂಗಂ ದಕ್ಷ ಅಧಿಕಾರಿ ಎಂದೇ ಖ್ಯಾತರಾಗಿರುವ ರವಿ ಡಿ ಚೆನ್ನಣ್ಣನವರ್ ಅವರು ಸಾಮಾನ್ಯ ಜನರ ಜೊತೆ ಸಾಮಾನ್ಯರಾಗಿ ಬೆರೆತು ಅವರ ಯೋಗಕ್ಷೇಮ  ವಿಚಾರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ . ಆಗಾಗ ರವಿ ಡಿ ಚೆನ್ನಣ್ಣನವರ್ ಅವರು  ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ವಿಚಾರಗಳ ವಿಡಿಯೋಗಳನ್ನು ನೀವು ನೋಡುತ್ತೀರಿ. ಇದೀಗ ನೆನ್ನೆ ಚುನಾವಣೆ ಬಿಗಿ ಭದ್ರತೆಯ ಕರ್ತವ್ಯದ ನಡುವೆ ಕೆಲ ನಿಮಿಷ ಮಗುವಿನೊಂದಿಗೆ ಕಾಲ ಕಳೆದ ರವಿಚನ್ನಣ್ಣವರ್.

ಅತಿ ಸೂಕ್ಷ್ಮ ಮತಗಟ್ಟೆ ಬೆಂಡಿಗಾನಹಳ್ಳಿ ಮತಗಟ್ಟೆಗೆ ಭೇಟಿ ಕೊಟ್ಟ ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣ ನವರ್, ಮತದಾನ ಮಾಡಲು ಬಂದಿದ್ದ ವೃದ್ಧ ದಂಪತಿಯ ಮೊಮ್ಮಗನ ಜೊತೆ ಕೆಲ ಕಾಲ ಸಮಯ ಕಳೆದರು.

ಅಜ್ಜಿಯ ಯೋಗಕ್ಷೇಮ ವಿಚಾರಿಸಿ, ವೋಟ್ ಮಾಡಿದ್ರಾ ಎಂದು ವಿಚಾರಿಸಿ, ನಮಗೆ ಊಟ ಹಾಕೋಲ್ವ ಎಂದು ತಮಾಷೆ ಮಾಡಿದರು. ಬನ್ನಿ ಮುದ್ದೆ ಊಟ ಮಾಡಿ ಕೊಡ್ತಿನಿ ಆದ್ರೆ ಕೋಳಿ ಸಾರ್ ಮಾತ್ರ ಕೇಳ್ಬೇಡಿ ಎಂದ ಅಜ್ಜಿ ಮಾತಿಗೆ ನಗುತ್ತಲೇ ಬರ್ತೇನೆ ಎಂದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here