ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಸಂಭ್ರಮ ನರ್ತಿಸುತ್ತಿದೆ. ರವಿಚಂದ್ರನ್ ಅವರ ಮುದ್ದಿನ ಮಗಳು ಗೀತಾಂಜಲಿ ಅವರ ವಿವಾಹ ಮಹೋತ್ಸವವು ಭರ್ಜರಿಯಾಗಿ ಆರಂಭವಾಗಿದೆ. ಮಗಳ ಮದುವೆಗೆ ತಿಂಗಳುಗಳಿಂದ ತಯಾರಿ ನಡೆಸಿರುವ ರವಿಚಂದ್ರನ್ ಅವರು ತಮ್ಮ ಮಗಳ ಮದುವೆಯನ್ನು ಒಂದು ಮಧುರವಾದ, ಸುಂದರವಾದ ಕನಸಿನಂತೆ , ರಂಗು ರಂಗಿನ ವೇದಿಕೆಯಲ್ಲಿ, ಕಲಾಕೃತಿಗಳ ಮಧ್ಯೆ ಮಾಡಲು ಅವರು ಎಷ್ಟೆಲ್ಲಾ ವ್ಯವಸ್ಥೆ ಮಾಡಿದ್ದಾರೆಂಬುದು ಮಾದ್ಯಮಗಳ ಮೂಲಕ ಎಲ್ಲರಿಗೂ ತಿಳಿದಿದೆ. ಇನ್ನು ಎಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದ, ವಿವಾಹದ ದಿನ ಬಂದೇ ಬಿಟ್ಟಿದೆ.

ರವಿಚಂದ್ರನ್ ಅವರ ಮನೆಯಲ್ಲಿ ವಿವಾಹದ ಶಾಸ್ತ್ರಗಳು ಬಹಳ ಅಚ್ಚುಕಟ್ಟಾಗಿ ಹಾಗೂ ಸಾಂಪ್ರದಾಯಿಕವಾಗಿ ಈಗಾಗಲೇ ನಡೆಯುತ್ತಿದ್ದು, ಅವರ ಕುಟುಂಬವೆಲ್ಲಾ ಈ ಸಂತಸದ ಪ್ರತಿ ಕ್ಷಣವನ್ನು ಕೂಡಾ ಹೃದಯದಿಂದ ಸಂಭ್ರಮಿಸುತ್ತಿದ್ದಾರೆ. ಅವರ ಸಂತಸದ ಕ್ಷಣಗಳ ಫೋಟೋಗಳು ಕೂಡಾ ಮಾದ್ಯಮಗಳ ಮೂಲಕ ಜನರ ಮುಂದೆ ಬಂದು ಅವರ ಅಭಿಮಾನಿಗಳಿಗೆ ಕೂಡಾ ಬಹಳ ಖುಷಿಯನ್ನು ತಂದು ಕೊಟ್ಟಿದೆ. ನಾಳೆ ರವಿ ಮಾಮನ ಮಗಳ ಮದುವೆ.

ಮದುವೆಯ ಸಂತಸದ ಒಂದು ಕ್ಷಣದಲ್ಲಿ ಮನೆಯಲ್ಲಿ ರವಿಚಂದ್ರನ್ ಅವರು ತಮ್ಮ ಪತ್ನಿ ಹಾಗೂ ಪುತ್ರ ಎಲ್ಲರ ಜೊತೆಗೂಡಿ ಸಂತೋಷದಿಂದ ಕುಣಿಯುತ್ತಿರುವ ಒಂದು ವಿಡಿಯೋ ವೈರಲ್ ಆಗಿದೆ. ರವಿಚಂದ್ರನ್ ಅವರು ಕುಟುಂಬದ ಸದಸ್ಯರು ಹಾಗೂ ಇತರರು ಒಟ್ಟಾಗಿ ಹಾಡೊಂದಕ್ಕೆ ನರ್ತನ ಮಾಡುತ್ತಿರುವ ಈ ವಿಡಿಯೋ ಎಲ್ಲರ ಗಮನವನ್ನು ಈಗ ಸೆಳೆದಿದೆ. ರವಿಚಂದ್ರನ್ ಅವರ ಸಂತೋಷ, ಸಂಭ್ರಮಗಳು ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಮಗಳ ಮದುವೆಯ ಖುಷಿ ಅವರಲ್ಲಿ ಕಾಣುತ್ತಿದೆ. VIDEO ನೋಡಿ ….

Crazy Pair in Sangeeth

ಸಿಪಾಯಿ ರವಿಚಂದರನ್ ಸೇನೆ – ರಿ यांनी वर पोस्ट केले सोमवार, २७ मे, २०१९

 

Sangeeth 😍😍😍

ಸಿಪಾಯಿ ರವಿಚಂದರನ್ ಸೇನೆ – ರಿ यांनी वर पोस्ट केले सोमवार, २७ मे, २०१९

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here