ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಎಲ್ಲರ ಗಮನ ಸೂಪರ್ ಸ್ಟಾರ್ ಮನೆ ಮಗಳ ಮದುವೆಯ ಬಗ್ಗೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಏಕೈಕ ಪುತ್ರಿ ಗೀತಾಂಜಲಿಯವರ ಮದುವೆ ,ಕನಸುಗಾರ ರವಿಚಂದ್ರನ್ ಅವರ ಮಗಳ ಮದುವೆಗೆ ಭರ್ಜರಿ ಸಿದ್ಧತೆಗಳು ನಡೆದಿದ್ದು, ಈಗಾಗಲೇ ಅದರ ಬಗ್ಗೆ ಜನರು ಬೆರಗಾಗಿದ್ದಾರೆ. ತಾರೆಯರ ತೋಟದಲ್ಲಿ ಚಂದ್ರನಂತೆ ಹೊಳೆಯಲಿದೆ ಈ ಮದುವೆ ಸಂಭ್ರಮ ಎಂದೇ ಹೇಳಲಾಗಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅದೆಷ್ಟೋ ಜನರು ಈಗಾಗಲೇ ಕಾಯುತ್ತಿದ್ದಾರೆ ಎನ್ನಬಹುದು. ಪ್ರತಿಯೊಂದನ್ನು ವಿಶೇಷವಾಗಿ ಮಾಡಲು ಕ್ರೇಜಿಸ್ಟಾರ್ ಅವರು ಬಹಳ‌ ಶ್ರಮವಹಿಸಿದ್ದಾರೆ. ಮಗಳ ಮೇಲಿನ ಅಮಿತವಾದ ಅವರ ಪ್ರೀತಿ ಈ ರೀತಿ ಹೊರಹೊಮ್ಮಿದೆ ಎಂದರೆ ಅದು ತಪ್ಪಲ್ಲ.

ಇಡೀ ಭಾರತೀಯ ಚಿತ್ರರಂಗವೇ ಬೆಂಗಳೂರಿಗೆ ಬರಲಿದೆ ಎಂಬುದು ಕೂಡಾ ಅಷ್ಟೇ ಖಚಿತ. ಏಕೆಂದರೆ ಕ್ರೇಜಿಸ್ಟಾರ್ ಬಾಲಿವುಡ್ , ಟಾಲಿವುಡ್ , ಕಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಕೂಡಾ ಪರಿಚಿತರು. ಅಲ್ಲಿನ ದಿಗ್ಗಜರನ್ನೆಲ್ಲಾ ತಮ್ಮ ಮಗಳ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಮೇ 29 ರಂದು ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ನಡೆಯಲಿರುವ ಈ ವಿವಾಹದಲ್ಲಿ ತಾರೆಯರ ದೊಡ್ಡ ದಂಡೇ ನೆರೆಯಲಿದೆ. ಮದುವೆ ಮಂಟಪದ ವಿನ್ಯಾಸವು ರವಿಚಂದ್ರನ್ ಅವರ ಕಲಾಕುಸುರಿಯಲ್ಲಿ ಕಣ್ಮನ ತುಂಬುವಂತೆ ಅರಳಲು ಬಹು ದಿನಗಳಿಂದ ಅವರು ಪ್ರಯತ್ನ ಮಾಡಿದ್ದಾರೆ. ಇಷ್ಟು ಅದ್ದೂರಿಯಾಗಿ ಮಾಡುತ್ತಿರುವ ಮದುವೆಯ ಕರೆಯೋಲೆಯೊಂದಿಗೆ ರವಿಚಂದ್ರನ್ ಅವರು ಒಂದು ಸಂದೇಶ ಕೂಡಾ ನೀಡಿದ್ದಾರೆ.

ಅವರು ಮದುವೆಗೆ ಬರುವ ಅತಿಥಿಗಳು ದಯವಿಟ್ಟು ಹೂಗುಚ್ಛಗಳನ್ನು ತರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರ ಬದಲಾಗಿ ಅದೇ ವೆಚ್ಚದ ವೋಚರ್ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಅದನ್ನು ಒಟ್ಟಾಗಿಸಿ ಅನಾಥಾಶ್ರಮಕ್ಕೆ ಕೊಡೋಣ. ಅದರಿಂದ ಎಷ್ಟೋ ಜನ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದವರು ಹೇಳಿದ್ದಾರೆ. ರವಿಚಂದ್ರನ್ ಅವರ ಈ ಮಾತು ನಿಜಕ್ಕೂ ಬಹಳ ಅರ್ಥಪೂರ್ಣ ಎನಿಸಿದೆ. ಹೂಗುಚ್ಛಗಳು ಒಣಗಿ ವ್ಯರ್ಥವಾಗುವ ಬದಲು, ಅದರ ಹಣ ಮಕ್ಕಳ ಜೀವನ ಅರಳಿಸಿದರೆ ಅದಕ್ಕಿಂತ ಧನ್ಯತೆ ಹಾಗೂ ಸಾರ್ಥಕತೆ ಇನ್ನೊಂದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here