ಮೀ ಟೂ ಅಭಿಯಾನ ಎಂದೊಡನೆ ಬಾಲಿವುಡ್ ನ ಕೆಲವು ನಡ, ನಿರ್ದೇಶಕರು ಬೆಚ್ಚಿ ಬೀಳುವಂತಹ ಸನ್ನಿವೇಶವನ್ನು ಹುಟ್ಟುಹಾಕಿದೆ. ಬಾಲಿವುಡ್ ನ ಹಿರಿಯ, ಮರ್ಯಾದಸ್ತ ಹಾಗೂ ಗಾಂಭೀರ್ಯತೆ ಮೆರೆಯುತ್ತಾ ಇದ್ದ ಹಲವು ನಟ, ನಿರ್ದೇಶಕರು ತಮಗೆ ಲೈಂಗಿಕ ಶೋಷಣೆ ನೀಡಿದರೆಂದು ಒಬ್ಬೊಬ್ಬರೇ ನಟಿಯರು ,ಧೈರ್ಯವಾಗಿ ತಮಗಾದ ಶೋಷಣೆಯನ್ನು ಹೇಳುತ್ತಾ, ಕೆಲವರ ನಿಜ ಸ್ವರೂಪವನ್ನು ಬೀದಿಗೆ ಎಳೆದಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಹೆಸರುಗಳು ಹೊರಬೀಳುತ್ತಿದ್ದು, ಆ ಹೆಸರುಗಳು ಎಲ್ಲರ ನಿದ್ದೆ ಕೆಡಿಸುವಂತಿವೆ. ಬಾಲಿವುಡದ ನ ತನುಶ್ರೀ ದತ್ತಾ, ನಾನಾ ಪಾಟೇಕರ್ ವಿರುದ್ಧ ಆಪಾದನೆ ಮಾಡಿದ ನಂತರ , ಇತರ ನಟಿಯರು ಬೋಲ್ಡಾಗಿ ತಮ್ಮ ಶೋಷಣೆಯ ಕತೆಗಳ ಎಳೆಯನ್ನು ಬಿಚ್ಚಿಡುತ್ತಿದ್ದಾರೆ.

ಮೀ ಟೂ ಅಭಿಯಾನಾ ರಾಷ್ಟ್ರ ವ್ಯಾಪಿ, ತೀವ್ರ ಸ್ವರೂಪ ಪಡೆಯುವಾಗ ಹಲವು ಸೆಲೆಬ್ರಿಟಿಗಳು ತಮ್ಮ ವ್ಯಾಖ್ಯಾನಗಳನ್ನು ನೀಡುತ್ತಿದ್ದು, ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಸರನ್ನು ತಳಕು ಹಾಕುವ ಯತ್ನವನ್ನು ಒಬ್ಬರು ಮಾಡಿದ್ದಾರೆ. ಹಾಗಾದರೆ ಆ ವಿಷಯ ಏನೆಂದು ವಿವರಣೆಗಳಿಗೆ ಹೋದರೆ ‌ತಿಳಿದ ಮಾಹಿತಿ ರೋಚಕವಾಗಿದೆ. ದಕ್ಷಿಣದ ಸುಪ್ರಸಿದ್ಧ ಹಾಗೂ ಬೋಲ್ಡ್ ನಟಿ ಖುಷ್ಬು. ಯಾವುದೇ ವಿಷಯವನ್ನಾದರೂ ನೇರವಾಗಿ ಮಾತನಾಡುವಾಗ ಈ ನಟಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ.

ಖುಷ್ಬು ಅವರು ಮೀ ಟೂ ಅಭಿಯಾನದ ಬಗ್ಗೆ ಮಾತನಾಡುತ್ತಾ ನನ್ನ ನಲವತ್ತು ವರ್ಷಗಳ ಸಿನಿಮಾ ಜೀವನದಲ್ಲಿ ಅಂತಹ ಒಂದು ಸಂಗತಿ ನನಗೆ ಎದುರಾಗಲೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅದಾದ ನಂತರ ಹಲವರು ಖುಷ್ಬು ಅವರ ಟ್ಟೀಟ್ ಗೆ ತಮ್ಮ ಸಪೋರ್ಟ್ ನೀಡುತ್ತಾ ಟ್ವೀಟ್ ಮಾಡಿದ್ದಾರೆ. ಆದರೆ ಅಷ್ಟಕ್ಕೇ ಮುಗಿದಿಲ್ಲ.. ಟ್ವೀಟ್ ಗಳಲ್ಲಿ ಲಕ್ಷ್ಮೀ ಎಂಬುವವರು ಕ್ರೇಜಿಸ್ಟಾರ್ ವಿ ರವಿಚಂದ್ರನ್ ಹೆಸರನ್ನು ಪ್ರಸ್ತಾಪಿಸುತ್ತಾ ನೀವು ಸುಳ್ಳು ಹೇಳ್ತಾ ಇದ್ದೀರಿ, ರವಿಚಂದ್ರನ್ ಅವರು ಆಗ ಎಂತಹ ರಸಿಕ ಹಾಗೂ ಅನ್ನೋದು ಎಲ್ಲರಿಗೂ ಗೊತ್ತು ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಬಹುಬೇಗ ಪ್ರತಿಕ್ರಿಯೆ ನೀಡಿದ ಖುಷ್ಬು ಅವರು ಲಕ್ಷ್ಮೀ ಅನ್ನುವವರಿಗೆ ಅಷ್ಟೇ ಚುರುಕಾಗಿ ಉತ್ತರವನ್ನು ನೀಡಿದ್ದಾರೆ. ರವಿಚಂದ್ರನ್ ಅವರ ಬಗ್ಗೆ , ಅವರ ಗುಣದ ಬಗ್ಗೆ ತಿಳಿಯದೆ ಕೇವಲ ಪ್ರಚಾರಕ್ಕಾಗಿ ಹೀಗೆ ಮಾತಾಡಬೇಡ ಎಂದು ಉತ್ತರಿಸಿದ ಖುಷ್ಬು, ಅವರು ಎಂತಹವರು ಎಂಬುದು ನನಗೆ ಗೊತ್ತು, ಅವರ ಸಹಾಯದಿಂದಲೇ ತನ್ನ ತಾಯಿ ಬದುಕಿರುವುದು‌ . ಅವರ ತಂದೆ ವೀರಾಸ್ವಾಮಿಯವರು ಕೂಡಾ ಅಷ್ಟೇ , ಅವರ ಬಗ್ಗೆ ನಿನಗೆ ಗೊತ್ತಾ ಎಂದೆಲ್ಲಾ ಟ್ವೀಟ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ ಖುಷ್ಬು. ರವಿಚಂದ್ರನ್ ಒಳ್ಳೆ ಗುಣದವರು, ಅವರು ಎಲ್ಲರಿಗೂ ಸ್ನೇಹಿತರು ಎಂದೆಲ್ಲಾ ಆಕೆಗೆ ಟ್ವೀಟ್ ಗಳ ಮೂಲಕ ಉತ್ತರಗಳನ್ನು ನೀಡಿದರು.

ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಬಗ್ಗೆ ಹಗುರವಾಗಿ ಮಾತಾಡಿದ ಲಕ್ಷ್ಮಿ ಎಂಬಾಕೆಗೆ ಖುಷ್ಬು ಅವರು ಮುಟ್ಟಿನೋಡುವಂತೆ ಉತ್ತರ ಕೊಟ್ಟಿದ್ದಾರೆ. ನನ್ನ ತಾಯಿ ಇಂದು ಜೀವಂತವಾಗಿ ಇದ್ದಾರೆ ಎಂದರೆ ಅದಕ್ಕೆ ಕಾರಣರು ಕ್ರೇಜಿಸ್ಟಾರ್ ವಿ ರವಿಚಂದ್ರನ್ ಎಂದು ಖುಷ್ಭೂ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here