ವಿ. ರವಿಚಂದ್ರನ್ ಈ  ಹೆಸರು ಕೇಳಿದರೆ ಕನ್ನಡಿಗರಿಗೆ ಒಂದು ಹುಮ್ಮಸ್ಸು ಎನ್ನಬಹುದು. ಸದಾ ಹೊಸತನವನ್ನೇ ಬಯಸುವ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ತಮ್ಮ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಹೊಸತನ್ನು ಪರಿಚಯ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಅದ್ದೂರಿ ಸೆಟ್ ಮತ್ತು ಅದ್ದೂರಿ ವೆಚ್ಚದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಸಿನಿಮಾಗಳೆಂದರೆ ಕನ್ನಡಿಗರಿಗೆ ಒಂದು ರೀತಿಯ ಕ್ರೇಜ್ ಎನ್ನಬಹುದು. ಪ್ರೇಮಲೋಕ ಸಿನಿಮಾದ ಮೂಲಕ ಪ್ರೇಮಿಗಳಿಗೆ ಪಾಠ ಶುರು ಮಾಡಿದ ವಿ ರವಿಚಂದ್ರನ್ ಅವರು ಯುವಪ್ರೇಮಿಗಳ ನೆಚ್ಚಿನ ನಟರಾಗಿ ಅಂದಿನಿಂದಲೇ ಗುರುತಿಸಿಕೊಂಡವರು.

ಕೇವಲ ನಟನೆಗಷ್ಟೇ ಸೀಮಿತವಾಗದೆ ನಿರ್ದೇಶಕ-ನಿರ್ಮಾಪಕ, ಸಂಗೀತ ನಿರ್ದೇಶಕನಾಗಿ ಸಹ ದೊಡ್ಡ ಹೆಸರು ಗಳಿಸಿದ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರಿಗೆ ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದೇ ಕರೆಯುತ್ತಾರೆ. ಅಪಾರ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿರುವ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ನಿನ್ನೆ ತಮ್ಮ ಜನ್ಮದಿನವನ್ನು ಅತ್ಯಂತ ಸರಳವಾಗಿ ತಮ್ಮ ಕುಟುಂಬದ ಜೊತೆ ಆಚರಿಸಿಕೊಂಡಿದ್ದಾರೆ. ದೇಶದಾದ್ಯಂತ ಇರುವ ಕೋವಿಡ್ 19 ನಿಂದಾಗಿ ರವಿಚಂದ್ರನ್ ಅವರು ಈ ಬಾರಿ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳಲು ಆಗಲಿಲ್ಲ. ಆದರೆ ಮುಂದಿನ ಬಾರಿ 60 ರ ವಸಂತಕ್ಕೆ ಕಾಲಿಡಲಿರುವ ಕ್ರೇಜಿಸ್ಟಾರ್ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಜನ್ಮ ದಿನ ಆಚರಿಸಿ ಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕುಟುಂಬದವರ ಜೊತೆ ಸರಳವಾಗಿ ಈ ಬಾರಿ ಸರಳವಾಗಿ  ಜನ್ಮದಿನಾಚರಣೆ ಆಚರಿಸಿಕೊಂಡ ರವಿಚಂದ್ರನ್ ಅವರಿಗೆ ಪತ್ನಿ ಹಾಗೂ ಮಕ್ಕಳು ಸಿಹಿತಿನಿಸುವ  ಮೂಲಕ ಶುಭಹಾರೈಸಿದರು. ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರಿಗೆ ಕನ್ನಡ ಚಿತ್ರರಂಗದ ಎಲ್ಲಾ ನಟ-ನಟಿಯರು ಹಾಗೂ ತಂತ್ರಜ್ಞರು ಶುಭಾಶಯ ತಿಳಿಸಿದ್ದಾರೆ. ಸದಾ ಹೊಸತನವನ್ನು ಕನ್ನಡಿಗರಿಗೆ ಪರಿಚಯಿಸಲು ಹಾತೊರೆಯುವ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರಿಗೆ ಸುದ್ದಿಮನೆ ತಂಡದ ವತಿಯಿಂದ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here