ಖ್ಯಾತ ಕ್ರಿಕೆಟ್ ಆಟಗಾರನ ಹೆಂಡತಿಯ ಮೇಲೆ ಪೊಲೀಸರಿಂದ ಹಲ್ಲೆ..ಟೀಮ್ ಇಂಡಿಯಾ ಆಟಗಾರ ಹಾಗೂ ಈ ಬಾರಿಯ ಐಪಿಲ್ ನ ಚೆನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾರ ಪತ್ನಿಯ ಮೇಲೆ ಪೊಲೀಸ್ ಪೇದೆಯೊಬ್ಬ ಹಲ್ಲೆ ನಡೆಸಿರುವ ಘಟನೆ ಗುಜರಾತ್ ನ ಜಾಮ್ ನಗರದಲ್ಲಿ ನಡೆದಿದೆ..

ಸೋಮವಾರ ಸಂಜೆ ಈ ಘಟನೆ ನಡೆದಿದ್ದು ರವೀಂದ್ರ ಜಡೇಜಾರ ಪತ್ನಿ ರಿವಾಬ ಚಲಾಯಿಸುತ್ತಿದ್ದ ಕಾರು,ಪೊಲೀಸ್ ಪೇದೆ ಸಂಜಯ್ ಅಹಿರ್ ಎಂಬಾತನ ಬೈಕ್ ಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ.ಏನಾಯಿತು ಎಂದು ನೋಡಲು ರಿವಾಬ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಪೇದೆ ಸಂಜಯ್,ಕೋಪ ಕೊಂಡು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಇದರಿಂದಾಗಿ ಜಡೇಜಾ ಪತ್ನಿ ರಿವಾಬಾಗೆ ಗಾಯಗಳಾಗಿದ್ದು,ಆಸ್ಪೆತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂದಿದ್ದಾರೆ.ರಿವಾಬರ ಮೇಲೆ ಹಲ್ಲೆ ನಡೆಸಿರುವ ಪೇದೆ ಸಂಜಯ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಇಲಾಖೆ ತನಿಖೆ ನಡೆಸಲಾಗುವುದು ಎಂದು ಜಾಮ್ ನಗರದ ಜಿಲ್ಲಾ ರಕ್ಷಣಾಧಿಕಾರಿ ಪ್ರದೀಪ್ ಸೇಜುನ್ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here