ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ವ ಕ್ಷೇತ್ರ ಬಿಟ್ಟು ತುಮಕೂರಿನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ಸೋಲು ಅನುಭವಿಸಿದರು. ಜೆ ಡಿ ಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಸಹ ಆಗಿರುವ ಹೆಚ್ ಡಿ ದೇವೇಗೌಡರ ಸೋಲು ನಾಡಿನ ಹಲವರಿಗೆ ಅಚ್ಚರಿ ಉಂಟು ಮಾಡಿದೆ. ಹೆಚ್ ಡಿ ದೇವೇಗೌಡರು ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿದ್ದೆ ಸೋಲಿಗೆ ಕಾರಣವಾಗಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌ . ದೊಡ್ಡ ಗೌಡರ ಸೋಲಿನ ಬಗ್ಗೆ ಇದುವರೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಕೆಲವರು ದೇವೇಗೌಡರ ಸೋಲನ್ನು ಸಮರ್ಥನೆ ಮಾಡಿಕೊಳ್ಳುವ ಬರದಲ್ಲಿ ದೇವೇಗೌಡರ ವಯಸ್ಸು ಮರೆತು ಅವಮಾನಿಸುವ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ಈ ನಡುವೆಯೇ ಹಲವಾರು ಜನರು ದೊಡ್ಡ ಗೌಡರಿಗೆ ಸೋಲು ಆಗಿದೆ‌ ಆದರೆ ಅದರ ಬಗ್ಗೆ ಈಗ ಚರ್ಚೆ ನಡೆಸಿ ದೇವೇಗೌಡರನ್ನು ಅವಮಾನಿಸುವ ಕೆಲಸ ಬೇಡ ಎನ್ನುತ್ತಿದ್ದಾರೆ. ಸ್ಯಾಂಡಲ್ ವುಡ್ ನಟ ರವಿಶಂಕರ್ ಗೌಡ ಸಹ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು

“ಭಾರತದೇಶದ ನಮ್ಮ ಕರುನಾಡಿನ ಮೊಟ್ಟಮೊದಲ ಹೆಮ್ಮೆಯ ಕನ್ನಡ ಪ್ರಧಾನಿ. ಕನ್ನಡ ನಾಡಿನ ಪರ ಸದಾ ಹೋರಾಟ ಮಾಡುವ ಹುಟ್ಟು ಹೋರಾಟಗಾರ. ದಯಮಾಡಿ ಅವರಿಗೆ ಇಂತಹ ಸಮಯದಲ್ಲಿ ಅವಮಾನ ಮಾಡಬೇಡಿ…
ಸಂಸತ್ತಿನಲ್ಲಿ ನಮ್ಮ ಹಿರಿತಲೆ ದೇವೆಗೌಡರೊಬ್ಬರು ಇರಬೇಕಿತ್ತು…..” ಎಂದು ದೇವೇಗೌಡರ ಪರ  ಟ್ವೀಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here