Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

RCB, ಪಂಜಾಬ್​ ಮಧ್ಯೆ ಇಂದು ಜಿದ್ದಾಜಿದ್ದಿ : ಹೈವೋಲ್ಟೇಜ್​ ಪಂದ್ಯದಲ್ಲಿ ಗೆಲ್ಲೋದ್ಯಾರು..?

ಚೆನ್ನೈ ಸೂಪರ್​​ ಕಿಂಗ್ಸ್​​ ವಿರುದ್ಧ ಸೋತ ಬೆನ್ನಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಂಜಾಬ್​​ ಕಿಂಗ್ಸ್​​ ವಿರುದ್ಧ ಸೆಣಸಾಡಲು ಸಜ್ಜಾಗಿದೆ. ಈ ಹೈವೋಲ್ಟೇಜ್​ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲೇ ಆರ್​​ಸಿಬಿ ಚೆನ್ನೈ ವಿರುದ್ಧ ಸೋತಿತ್ತು. 174 ರನ್​ ಟಾರ್ಗೆಟ್​ ನೀಡಿದ್ರೂ 6 ವಿಕೆಟ್​ಗಳ ಸೋಲು ಅನುಭವಿಸಿತ್ತು. ಆರ್​​​ಸಿಬಿ ನೀಡಿದ್ರೂ ಬಿಗ್​ ಟಾರ್ಗೆಟ್​ ಆದ್ರೂ ಬೌಲರ್​ಗಳು ಡಿಫೆಂಡ್​ ಮಾಡಲು ಆಗಲಿಲ್ಲ. ಈ ಸೋಲಿನಿಂದ ಕಂಗೆಟ್ಟಿರೋ ಆರ್​​ಸಿಬಿ ತವರಿನಲ್ಲಿ ಪಂಜಾಬ್​ ತಂಡವನ್ನು ಕಟ್ಟಿಹಾಕಲು ಸಜ್ಜಾಗಿದೆ. ಇನ್ನೊಂದೆಡೆ ಪಂಜಾಬ್​ ತಂಡವು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದು ಬೀಗಿತ್ತು. ಸದ್ಯ ಪಂಜಾಬ್​ ಸ್ಟ್ರೆಂಥ್​​​ ಸ್ಯಾಮ್​ ಕರನ್​​ ಮತ್ತು ಲಿಯಾಮ್​ ಲಿವಿಂಗ್​ಸ್ಟೋನ್​ ಆಗಿದ್ದಾರೆ. ಆರ್​​ಸಿಬಿಯಲ್ಲಿ ವಿರಾಟ್​, ಫಾಫ್​​, ದಿನೇಶ್​ ಕಾರ್ತಿಕ್​, ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​ ಇದ್ದಾರೆ. ಉಭಯ ತಂಡಗಳ ಪ್ಲೇಯಿಂಗ್​ ಎಲೆವೆನ್​ ಹೀಗಿವೆ..! ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್. ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್.