ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ನಡೆಯಲಿರುವ IPL ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಲಿದೆ.ಈ ಸೀಸನ್ ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ತಂಡದ ವಿರುದ್ಧ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನಲ್ಲಿ ಆಡುತ್ತಿರುವ ಮೊದಲ ಪಂದ್ಯ ಆಗಿರುವುದರಿಂದ ಅಭಿಮಾನಿಗಳ ಬೆಂಬಲ ಇದ್ದೇ ಇರುತ್ತದೆ.

ಇಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿರುವ ವಿರಾಟ್ ಕೊಹ್ಲಿ ಪಡೆಗೆ ಪಂಜಾಬ್ ತಂಡ ಪ್ರಬಲ ಪೈಪೋಟಿ ಕೊಡಲಿದೆ.ಇಷ್ಟು ವರ್ಷಗಳ ಬೆಂಗಳೂರು ತಂಡದ ಪರ ಬ್ಯಾಟಿಂಗ್ ಬೀಸಿದ್ದ ಕ್ರಿಸ್ ಗೇಲ್ ಈಗ ಪಂಜಾಬ್ ತಂಡದಲ್ಲಿ ಬೆಂಗಳೂರು ವಿರುದ್ದ ಆಡಲಿದ್ದು ಬೆಂಗಳೂರು ತಂಡ ಕೈಬಿಟ್ಟಿದ್ದಕ್ಕೆ ಬ್ಯಾಟಿಂಗ್ ಮುಖಾಂತರ ಸೇಡು ತೀರಿಸಿಕೊಳ್ಳಲು ಕಾತರರಾಗಿದ್ದಾರೆ.

ಕ್ರಿಸ್ ಗೇಲ್ ಜೊತೆಗೆ ಯುವರಾಜ್ ಸಿಂಗ್ ,ಕನ್ನಡದವರೇ ಆದ ಕೆ.ಎಲ್ ರಾಹುಲ್ ,ಮಯಾಂಕ್ ಅಗರ್ ವಾಲ್ ,ಕರುಣ್ ನಾಯರ್,ಡೇವಿಡ್ ಮಿಲ್ಲರ್,ಆರನ್ ಪಿಂಚ್ ,ಮನೋಜ್ ತಿವಾರಿ ಮತ್ತು ನಾಯಕ ರವಿಚಂದ್ರನ್ ಅಶ್ವಿನ್ ಅವರ ಬಲವಾದ ಸೈನ್ಯ ಇದೆ.ಇನ್ನು ಪಂಜಾಬ್ ಗೆ ಟಾಂಗ್ ಕೊಡಲು ವಿರಾಟ್ ಕೊಹ್ಲಿ ಪಡೆ ಕೂಡ ಸಜ್ಜಾಗಿದೆ.

ವಿರಾಟ್ ಕೊಹ್ಲಿ , ಮೆಕ್ಕುಲಮ್ , ಎ ಬಿ ಡಿ ವಿಲಿಯರ್ಸ್, ಸರ್ಫರಾಜ್ ಖಾನ್ ,ಕ್ರಿಷ್ ವೋಕ್ಸ್ ,ಉಮೇಶ್ ಯಾದವ್ ಅಂತಹ ಸ್ಟ್ರಾಂಗ್ ಪ್ಲೇಯರ್ಸ್ ತಮ್ಮ ಸಾಮರ್ಥ್ಯ ತೋರಿಸಲು ರೆಡಿಯಾಗಿದ್ದಾರೆ.ಒಟ್ಟಿನಲ್ಲಿ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here