ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸುತ್ತಿರುವ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ “ಸಲಗ” ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿರುವ “ಸಲಗ” ಚಲನಚಿತ್ರದ ಮೇಕಿಂಗ್ ವಿಡಿಯೋ ಮತ್ತು ಮೊದಲ ಹಾಡು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಸೂರಿ ಅಣ್ಣಾ ಸಾಂಗ್ ಯೂಟ್ಯೂಬ್ ಮತ್ತು ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿ ಮಾಡುತ್ತಿದೆ.

ಅಷ್ಟೇ ಅಲ್ಲದೆ ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ಗಿಂತಲೂ ಅಧಿಕ ವೀವ್ಸ್ ಪಡೆದು ಜನಪ್ರಿಯ ಪಡೆದುಕೊಂಡಿದೆ . ಇದೀಗ ಸಲಗ ಚಿತ್ರತಂಡದಿಂದ ಮತ್ತೊಂದು ಬಿಗ್ ನ್ಯೂಸ್ ಹೊರಗೆ ಬಿದ್ದಿದ್ದು ಸಲಗ ಚಿತ್ರತಂಡವು ದುನಿಯಾ ವಿಜಯ್ ಅವರ ಜನ್ಮದಿನಕ್ಕೆ ಸಲಗ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದೆ.

ಕನ್ನಡ ಚಿತ್ರರಂಗದ “ರಿಯಲ್ ಸ್ಟಾರ್ ಉಪೇಂದ್ರ” ಅವರು “ದುನಿಯಾ ವಿಜಯ್” ಅಭಿನಯದ “ಸಲಗ ಚಿತ್ರದ ಟೀಸರ್”  ಜನವರಿ 19 ರಂದು ರಾತ್ರಿ 12 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಜನವರಿ 20 ದುನಿಯಾ ವಿಜಯ್ ಅವರ ಜನ್ಮದಿನ ಇರುವುದರಿಂದ ಸಲಗ ಚಿತ್ರದ ಟೀಸರ್ 19 ರ ಮಧ್ಯರಾತ್ರಿ ಬಿಡುಗಡೆ ಆಗುತ್ತಿದ್ದು,  ದುನಿಯಾ ವಿಜಯ್ ಅಭಿಮಾನಿಗಳಿಗಾಗಿ ಜನವರಿ 19ರ ಸಂಜೆಯಂದು ಸಲಗ ಚಿತ್ರದ ಟೀಸರ್ ಉಡುಗೊರೆ ರೂಪದಲ್ಲಿ ಸಿಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here