ಒಂದೇ ಭಾಷೆಯೆನ್ನುವುದು ಎಮೋಷನ್ ಅಷ್ಟೇ..  ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ ನಮ್ಮ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ದೇಶ ಹಾಗಾಗಿ ಇಂತಹ ದೇಶದಲ್ಲಿ  ಒಂದೇ ಭಾಷೆಯನ್ನು ಬಳಸಿ ಎಂದು ಹೇರುವ ಅಧಿಕಾರ ಯಾರಿಗೂ ಇಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದ್ದಾರೆ. ಭಾಷೆ ಬಗ್ಗೆ ಕೇಂದ್ರದ ನಾಯಕರು ಹೇಳುತ್ತಿರುವ ರೀತಿ ಹೇಗಿದೆಯೆಂದರೆ ನಿಮ್ಮ ತಾಯಿಯನ್ನು ನಮ್ಮ ತಾಯಿ ಎಂದು ಒಪ್ಪಿಕೊಳ್ಳಿ ಎಂದು ಎಂಬ ಅರ್ಥದಲ್ಲಿ ಇದೆ. ನಮಗೆ ನಿಮ್ಮ ತಾಯಿಯ ಮೇಲೆ ಗೌರವವಿದೆ ಆದರೆ ನಮಗೆ ನಮ್ಮ ತಾಯಿಯೇ ಮುಖ್ಯ ಮತ್ತು ಮೊದಲು ಎಂದು ರಿಯಲ್ ಸ್ಟಾರ್ ಉಪೇಂದ್ರ ಕೊಟ್ಟಿದ್ದಾರೆ.

ನಾವು ನಿಮ್ಮ ಮನೆಗೆ ಬಂದಾಗ ನಿಮ್ಮ ತಾಯಿ ನೀಡುವ ಊಟವನ್ನು ಮಾಡುತ್ತೇವೆ ಆದರೆ ನಮ್ಮ ಮನೆಯಲ್ಲಿ ನಮ್ಮ ತಾಯಿ ಏನು ಕೊಡುತ್ತಾರೆ ಅದನ್ನೇ ತಿನ್ನುತ್ತೇವೆ ಭಾಷೆ ವಿಚಾರದಲ್ಲೂ ಅಷ್ಟೇ ನಮಗೆ ಕನ್ನಡ ಮುಖ್ಯ ಆಮೇಲೆ ಉಳಿದ ಭಾಷೆಗಳ ಚಿಂತನೆ ಎಂದು ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದ್ದಾರೆ. ನಾಯಕರು ಎಂದೆನಿಸಿಕೊಂಡವರು ಭಾಷಾ ವಿಚಾರದಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಬೇರೆ ಭಾಷೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಮತ್ತು ಒಬ್ಬರ ಮೇಲೆ ಭಾಷೆಯನ್ನು ಹೇರಲು ಸಾಧ್ಯವಿಲ್ಲ ಎಂದು ರಿಯಲ್ ಸ್ಟಾರ್ ಉಪಂದ್ರ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಒಂದೇ ದೇಶ ಒಂದೇ ಭಾಷೆ ಬಗ್ಗೆ ಹಲವಾರು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕನ್ನಡ ಚಿತ್ರರಂಗದ ನಟ-ನಟಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಡಾಕ್ಟರ್ ಶಿವರಾಜ್ ಕುಮಾರ್ ಸಹ ಹಿಂದಿ ಹೇರಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದರುಇಂದು ಬೆಳಗ್ಗೆ ಡಾಕ್ಟರ್ ಶಿವರಾಜ್ ಕುಮಾರ್ ಸಹ ಹಿಂದಿ ಹೇರಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದನ್ನು  ಇಲ್ಲಿ ಸ್ಮರಿಸಬಹುದಾಗಿದೆ  ಇಲ್ಲಿ ಸ್ಮರಿಸಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here