ಹೈದರಾಬಾದ್ ಶಂಶಾಬಾದ್ ಬಳಿ ನಡೆದ ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಅತ್ಯಾಚಾರ ಮತ್ತು ಕೊಲೆ‌‌ ಪ್ರಕರಣದ ತನಿಖೆ ಚುರುಕುಗೊಂಡಂತೆ ಹೊರ ಬರುತ್ತಿರುವ ಸತ್ಯಗಳು ಬೆಚ್ಚಿ ಬೀಳುಸುವಂತಿವೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೋರಾಟ ಆರಂಭವಾಗಿದೆ. ಮತ್ತೊಂದೆಡೆ ಹೈದರಾಬಾದಿನ ಯಾವುದೇ ವಕೀಲರು ಕೂಡಾ ಆರೋಪಿಗಳ ಪರವಾಗಿ ಕೇಸನ್ನು ವಾದಿಸುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಈ ನಡುವೆ ಆರೋಪಿಗಳನ್ನು ಬಂಧಿಸಿದ ನಂತರ ಪೋಲಿಸ್ ತನಿಖೆಯಲ್ಲಿ ಭೀಕರವಾದ ಸತ್ಯಗಳು ಹೊರ ಬಂದಿವೆ.

ಆರೋಪಿಗಳು ಪ್ರಿಯಾಂಕ ಅವರ ಮೇಲೆ ದುಷ್ಕೃತ್ಯಕ್ಕೆ ಮುಂದಾಗುವ ಮೊದಲು ಆಕೆಗೆ ಮದ್ಯ ಸೇವಿಸುವಂತೆ ಬಲವಂತ ಮಾಡಿದ್ದಾರೆ. ತಂಪು ಪಾನೀಯದಲ್ಲಿ ವಿಸ್ಕಿಯನ್ನು ಮಿಕ್ಸ್ ಮಾಡಿ ಪ್ರಿಯಾಂಕ ಅವರಿಗೆ ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಅದಕ್ಕೆ ಒಪ್ಪದಿದ್ದಾಗ ನಾಲ್ವರು ಅದನ್ನು ಕುಡಿಯುವಂತೆ ಆಕೆಗೆ ಚಿತ್ರ ಹಿಂಸೆ ನೀಡದ್ದಾರೆ. ಲೈಂಗಿಕವಾಗಿ ಆಕೆಯ ಮೇಲೆ ಹಿಂಸೆ ನಡೆಸುವಾಗ ಆರೋಪಿಗಳು ಆಕೆಯ ಮೂಗು ಮತ್ತು ಬಾಯನ್ನು ಮುಚ್ಚಿದ್ದಾರೆ. ಇದರಿಂದ ಉಸಿರಾಡಲು ಆಗದೆ ಪ್ರಿಯಾಂಕ ಸಾವನ್ನಪ್ಪಿದ್ದಾರೆ. ಇದನ್ನು ಗಮನಿಸಿದ ಆರೋಪಿಗಳು ಭಯ ಭೀತರಾಗಿದ್ದಾರೆ.

ಗಾಬರಿಯಾದ ಆರೋಪಿಗಳು ಪೆಟ್ರೋಲನ್ನು ತಂದು ಶವದ ಮೇಲೆ ಹಾಕಿ ಸುಟ್ಟಿದ್ದಾರೆ. ಆರೋಪಗಳು ಇಂತಹ ದೌರ್ಜನ್ಯ ನಡೆಸುವ ಮೊದಲು ತೊಂಡಪಲ್ಲಿಯಲ್ಲಿ ವಿಸ್ಕಿ ಬಾಟಲ್ , ಸ್ನಾಕ್ಸ್ ಮುಂತಾದವುಗಳನ್ನು ಖರೀದಿ ಮಾಡಿ, ನಾಲ್ವರು ಮದ್ಯ ಸೇವಿಸಿ ಅಪರಾಧ ಕೃತ್ಯವನ್ನು ನಡೆಸಿದ್ದಾರೆ ಎಂದು ಪೋಲಿಸ್ ಕಮೀಷನರ್ ಅವರು ಮಾಹಿತಿಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here