ಕನಗನಡ ಚಿತ್ರರಂಗದ ಎರಡು ಸೂಪರ್‌ಸ್ಟಾರ್ ಗಳಿಗೆ ಸೋಮವಾರ ಅಕ್ಷರಶಃ ಕರಾಳ ದಿನ ಎನ್ನಬಹುದು. ದುನಿಯಾ ವಿಜಯ್ ಅವರು ನಿರೀಕ್ಷೆ ಮಾಡದ ಪ್ರಕರಣದಲ್ಲಿ ಜೈಲು ಸೇರಿ ಕನ್ನಡ ಚಿತ್ರರಂಗಕ್ಕೆ ಮತ್ತು ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಇನ್ನು ಮೈಸೂರಿನಲ್ಲಿ ಒಡೆಯ ಚಿತ್ರೀಕರಣದಲ್ಲಿ ತೊಡಗಿದ್ದ ಅಪಾರ ಅಭಿಮಾನಿಗಳ ನೆಚ್ಚಿನ ನಟರಾದ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೈಸೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದರ್ಶನ್ ಅವರು ತನ್ನ ಬಲಗೈನ ಮೂಳೆಯನ್ನು ಮುರಿದುಕೊಂಡು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಇಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂದು ನಡೆದ ಅಂಬಿ‌ ನಿಂಗ್ ವಯಸ್ಸಾಯ್ತೋ ಚಿತ್ರದ ಪ್ರೆಸ್ ಮೀಟ್ ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಏನೇಳಿದ್ರು ಅಂತೀರ ? ಸ್ಯಾಂಡಲ್​ವುಡ್​ ದಿಗ್ಗಜ, ರೆಬೆಲ್​ ಸ್ಟಾರ್​ ಅಂಬರೀಶ್​ ದುನಿಯಾ ವಿಜಯ್​ ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಪ್ರಕರಣಗಳ ಬಗ್ಗೆ ರೆಬೆಲ್​ ಆಗಿಯೇ ಪ್ರತಿಕ್ರಿಯಿಸಿದ್ದಾರೆ.ಅದೇನಪ್ಪಾ ಅಂದ್ರಾ, ಅಂಬಿ ನಿಂಗ್​ ವಯಸ್ಸಾಯ್ತೋ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅಂಬರೀಶ್ ಅವರು

ಮೊದಲೆಲ್ಲಾ ಬುದ್ಧಿ ಹೇಳಿದ್ದೇನೆ, ಈಗ ಯಾವ ಬುದ್ಧಿ ಹೇಳೋದು? ಯಾರು ಬಂದಿಲ್ಲ ಅಂತ ಕಣ್ಣೀರು ಹಾಕ್ತಿದ್ದಾರೆ, ನನಗೂ ಹೋಗೋ ಆಸೆ ಆದರೆ ಹಿಂಸೆ ‌ಪಡ್ತಾ ಹೇಗೆ ಹೋಗೋದು ಎಂದರು.ಇನ್ನೂ ದರ್ಶನ್ ಕಾರು ಅಪಘಾತಕ್ಕೆ ಪ್ರತಿಕ್ರಿಯಿಸಿ, ಈಗಿನ ಯುವಕರಿಗೆ ಜೋಷ್ ಜಾಸ್ತಿ, ಆ ಕಾರುಗಳನ್ನ ಬೆಳಗ್ಗೆ ಓಡಿಸಲು ಸಾಧ್ಯವಿಲ್ಲ. ಅದಕ್ಕೆ ರಾತ್ರಿನೇ ಓಡಿಸ್ತಾರೆ. ಅಂತಹ ಕಾರುಗಳನ್ನ ಖರೀದಿಸುವುದೇ ತಪ್ಪು ಎಂದರು.ಇನ್ನೂ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಬಗ್ಗೆ ಮಾತನಾಡುತ್ತಾ, ನನ್ನ ಲೈಫ್​ನಲ್ಲೂ ಇದೇ ಸಿನಿಮಾ ಲಾಸ್ಟ್​ ಎಂದು ಮುಂದೆ ಚಿತ್ರಗಳಲ್ಲಿ ನಟಿಸುವುದಿಲ್ಲವೆಂಬ ಕುರುಹು ನೀಡಿದ್ದಾರೆ.ಆದರೆ ಇದೇ ಸಮಯದಲ್ಲಿ ಒಂದು ವೇಳೆ ನನಗಿಷ್ಟವಾದ ಕಥೆಗಳು  ಬಂದ್ರೆ ಮಾಡುವ ಯೋಚನೆ ಮಾಡುತ್ತೇನೆ ಎಂದು ತಿಳಿಸಿದರು‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here