ಪ್ರತಿದಿನ ಕೊರೊನಾ ಪ್ರಕರಣಗಳು, ಅವುಗಳು ಏರುತ್ತಿರುವ ಸಂಖ್ಯೆ, ಕಂಟೈನ್ಮೆಂಟ್ ಝೋನ್ ಗಳ ಏರಿಕೆ ಇವೆಲ್ಲಾ ಕೇಳಿ ಕೇಳಿ ಕಂಗೆಟ್ಟಿದ ಭಾರತೀಯರಿಗೆ ಇಂದು ಒಂದೊಳ್ಳೆ ಸುದ್ದಿಯೆಂದರೆ ಅದು ದೇಶದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸೋಂಕಿತರಲ್ಲಿ ಚೇತರಿಕೆ ಕಂಡು ಬಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬ ಸಮಾಧಾನಕರವಾದ ವಿಷಯವೊಂದು ಹೊರ ಬಂದಿದೆ. ಪ್ರಸ್ತುತ ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುವವರ ದರ 58% ಕ್ಕೆ ಏರಿದೆ.

ಈ ವಿಷಯವನ್ನು ಸ್ವತಃ ಆರೋಗ್ಯ ಸಚಿವರಾದ ಡಾ.ಹರ್ಷವರ್ಧನ್ ಅವರು ತಿಳಿಸಿದ್ದಾರೆ. ಅವರು ದೇಶದಲ್ಲಿ ದಿನದಿಂದ ದಿನಕ್ಕೆ ಹೇಗೆ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆಯೋ ಅದೇ ರೀತಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ
ಎಂದು ತಿಳಿಸಿರುವ ಅವರು ದೇಶದಲ್ಲಿ ಇದುವರೆವಿಗೂ ಮೂರು ಲಕ್ಷ ಸೋಂಕಿತರು ಡಿಸ್ ಚಾರ್ಜ್ ಆಗಿದ್ದಾರೆ ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ. ಇದರ ಜೊತೆಗೆ ಇನ್ನೊಂದು ಒಳ್ಳೆಯ ವಿಷಯ ಏನೆಂದರೆ ದೇಶದಲ್ಲಿ ಸೋಂಕಿನಿಂದ ಸಾವಿನ ಪ್ರಮಾಣ ಕೂಡಾ 3% ಇದ್ದು, ಇದು ತೀರಾ ಆತಂಕಕಾರಿ ವಿಷಯವಲ್ಲ ಎಂದವರು ಹೇಳಿದ್ದಾರೆ.

ಗುಣಮುಖರಾಗುವವರ ಸಂಖ್ಯೆ ಏರಿಕೆ ಆಗಿರುವುದು ಒಂದು ಒಳ್ಳೆಯ ಸುದ್ದಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ಸಂದರ್ಭದಲ್ಲಿ ದೇಶದಲ್ಲಿ ದಿನವೊಂದಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಕೂಡಾ ಏರುತ್ತಿರುವುದು ಕೂಡಾ ವಾಸ್ತವ ಅಂಶವಾಗಿದೆ. ಕೊರೊನಾ ಔಷಧಿ ಬರುವವರೆಗೆ ಕೊರೊನಾ‌ ನಿಯಂತ್ರಣದ ಬಗ್ಗೆ ಇನ್ನಷ್ಟು ಜಾಗರೂಕರಾಗಿ ಇರಬೇಕಾದ ಅನಿವಾರ್ಯತೆ ಕೂಡಾ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here