ರವಿ ಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರ ಈಗಾಗಲೇ ಪ್ರೇಕ್ಷಕರನ್ನು ತನ್ನ ವಿಶೇಷತೆಗಳಿಂದಾಗಿ ಸೆಳೆಯುತ್ತಿದೆ. ಚಿತ್ರದ ಟ್ರೈಲರ್, ಹಾಡುಗಳು, ಪೋಸ್ಟರ್ ಸೇರಿದಂತೆ ಪ್ರತಿಯೊಂದೂ ಕೂಡಾ ವಿಶೇಷ ಹಾಗೂ ಆಸಕ್ತಿಕರ ಎನಿಸಿದ್ದು ಒಂದು ರೀತಿಯಲ್ಲಿ ಇದು ಜನರಲ್ಲಿ ಕುತೂಹಲವನ್ನು ಹುಟ್ಟು ಹಾಕುತ್ತಿರುವುದು ಕೂಡಾ ನಿಜವಾಗಿದೆ. ಹೀಗೆ ಅನೇಕ ವಿಶೇಷತೆಗಳ ಮೂಲಕ ಜನರಿಗೆ ಈ ಚಿತ್ರ ಹತ್ತಿರವಾಗುತ್ತಿದ್ದರೂ, ಆ ಸಂತಸದ ನಡುವೆಯೇ ಇಂದು ದುಃಖದ ವಿಷಯ ಕೂಡಾ ಈ ಚಿತ್ರದ ಜೊತೆಗೆ ಅಥವಾ ಚಿತ್ರ ತಂಡದವರ ಜೊತೆಗೆ ಬೆಸೆದುಕೊಂಡಿದೆ. ಆ ದುಃಖಕ್ಕೆ ಕಾರಣವಾದರೂ ಏನು ಎಂದು ನೋಡಿದಾಗ ಅದು ಮಾಸ್ತಿ ಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಮರೆಯಾದ ಕನ್ನಡದ ಪ್ರತಿಭಾವಂತ ಯುವ ನಟ ಉದಯ್ ಅವರ ನೆನಪುಗಳು.

ಈಗ ಬಿಡುಗಡೆಯಾಗಲು ಸಿದ್ಧವಾಗಿರೋ ಗಿರ್ ಗಿಟ್ಲೆ ಸಿನಿಮಾಕ್ಕೂ ಹಾಗೂ ಉದಯ್ ಅವರ ನೆನಪುಗಳಿಗೂ ಏನು ಸಂಬಂಧ ಎನಿಸಬಹುದು. ನಿಜಕ್ಕೂ ಅಂತಹುದೊಂದು ನಿಕಟ ಹಾಗೂ ಆತ್ಮೀಯ ಸಂಬಂಧ ಇಲ್ಲಿದೆ. ಕಾರಣ ಉದಯ್ ಅವರು ಈ ಚಿತ್ರದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಬಿಡುಗಡೆಯ ನಂತರ ಇದು ಉದಯ್ ಅವರ ಕಡೆಯ ಚಿತ್ರವಾಗುವುದು. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಜೀವ ತುಂಬಿರುವ ಅವದು ಇಡೀ ಚಿತ್ರ ತಂಡದೊಂದಿಗೆ ಬೆರೆತು ಅವರೊಂದಿಗೆ ಬಹಳ ಆತ್ಮೀಯತೆಯನ್ನು ಇಟ್ಟುಕೊಂಡಿದ್ದರು.

ಗಿರ್ ಗಿಟ್ಲೆ ಚಿತ್ರದ ಕಥೆಯನ್ನು ಕೇಳಿದಾಗಲೇ ಅದರಿಂದ ಥ್ರಿಲ್ ಆದ ನಟ ಉದಯ್ ಅವರು ತಾವು ನಟಿಸುವುದಾಗಿ ಒಪ್ಪಿಗೆ ನೀಡಿದ್ದರಂತೆ. ಅವರ ಪಾತ್ರ ಅವರಿಗೆ ಅಷ್ಟು ಇಷ್ಟವಾಗಿತ್ತು. ಚಿತ್ರ ತಂಡದವರ ಪ್ರಕಾರ ಉದಯ್ ಬದುಕಿದ್ದಿದ್ದರೆ ಅವರ ಈ ಪಾತ್ರವು ಚಿತ್ರರಂಗದಲ್ಲಿ ಅವರ ವೃತ್ತಿ ಬದುಕಿಗೆ ಒಂದು ಹೊಸ ಆಯಾಮವನ್ನೇ ಈ ಪಾತ್ರ ಸೃಷ್ಟಿಸುತ್ತಿತ್ತು ಎಂದಿದ್ದಾರೆ. ಉದಯ್ ತಮ್ಮ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಕೆಲವೇ ದಿನಗಳಲ್ಲಿ ಗಿರ್ ಗಿಟ್ಲೆ ಬಿಡುಗಡೆಗೆ ರೆಡಿಯಾಗಿದೆ. ಆ ಸಂತಸದ ನಡುವೆ ಉದಯ್ ಇಲ್ಲವೆಂಬ ನೋವನ್ನು ಚಿತ್ರ ತಂಡಕ್ಕೆ ಉಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here