ಹಳೆಯ ಹಾಗೂ ಅಂದಿನ ಹೆಸರಾಂತ , ಭರ್ಜರಿ ಹಿಟ್ ಆದಂತಹ ಹಾಗೂ ನಟ ದಿಗ್ಗಜರ ಸಿನಿಮಾಗಳ ಟೈಟಲ್ ಗಳು ಬಹಳ ಸೊಗಸಾಗಿರುತ್ತಿದ್ದವು. ಆದರೆ ಇಂದು ಕೆಲವು ಹೊಸ ನಿರ್ಮಾಪಕ , ನಿರ್ದೇಶಕರು ತಮ್ಮ ಚಿತ್ರಗಳಿಗಾಗಿ ಅದೇ ಹಳೆಯ ಹೆಸರುಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದಲೆ ಸಿನಿಮಾ‌ ಹೊಸದಾದರೂ, ಟೈಟಲ್ ಮಾತ್ರ ಹಳೆಯ ಚಿತ್ರವೊಂದರ ಹೆಸರಾಗಿರುವ ಟ್ರೆಂಡ್ ಎಲ್ಲೆಲ್ಲೂ ಇದೆ. ಆದರೆ ಈ ವಿಷಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟ ರಾಘವೇಂದ್ರ ರಾಜ್‍ಕುಮಾರ್ ಅವರು. ಈಗ ಬರುತ್ತಿರುವ ಹೊಸ ಚಿತ್ರಗಳಿಗೆ ಅಣ್ಣಾವ್ರು ನಟಿಸಿದ್ದ ಚಿತ್ರಗಳ ಹೆಸರುಗಳ ಮರುಬಳಕೆ ಮಾಡದಂತೆ ನಿಯಮ ತರಲು ವಾಣಿಜ್ಯ ಮಂಡಳಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ಅಣ್ಣಾವ್ರು ಚಿತ್ರಗಳು ಎಂದರೆ ಅದು ಅಭಿಮಾನಿಗಳ ಪಾಲಿಗೆ ಅಮೃತವಿದ್ದಂತೆ. ಆ ಚಿತ್ರಗಳ ಮೂಲಕ ಅಣ್ಣಾವ್ರು ಸದಾ ನಮ್ಮೊಂದಿಗೆ ಇರುತ್ತಾರೆ. ಆದರೆ ಇಂದು ಹೊಸಬರ ಸಿನಿಮಾಗಳಿಗೆ, ಯುವನಟರ ಚಿತ್ರಗಳಿಗೆ ಸುಲಭದ ಪ್ರಚಾರ ಅಥವಾ ಮತ್ತಾವುದೋ ಕಮರ್ಷಿಯಲ್ ದೃಷ್ಟಿಯಿಂದ ಅಣ್ಣಾವ್ರ ಯಶಸ್ವಿ ಚಿತ್ರಗಳ ಹೆಸರುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಇದು ಅಣ್ಣಾವ್ರ ಅಭಿಮಾನಿಗಳಿಗೆ ಹಿಡಿಸದೆ, ನೋವುಂಟು ಮಾಡುತ್ತಿರುವ ಕಾರಣದಿಂದ ಅಭಿಮಾನಿಗಳಿಗಾಗಿಯೇ ತಾವು ಇಂತಹ ಹೆಜ್ಜೆ ಇಡಲು ಮುಂದಾಗಿರುವುದಾಗಿ ರಾಘವೇಂದ್ರ ರಾಜಕುಮಾರ್ ಅವರು ಹೇಳಿದ್ದಾರೆ.

ಗೂಗಲ್ ನಲ್ಲಿ ಅಣ್ಣಾವ್ರ ಶ್ರೀ ನಿವಾಸ ಕಲ್ಯಾಣ, ದಾರಿ ತಪ್ಪಿದ ಮಗ, ಎರಡು ಕನಸು ಎಂಬ ಚಿತ್ರಗಳನ್ನು ಹುಡುಕಲು ಹೋದರೆ ಅಲ್ಲಿ ಸಿಗುವುದು ಇಂದಿನ ಹೊಸ ಲವ್ , ಕಾಮೆಡಿ ಅಥವಾ ಆ್ಯಕ್ಷನ್ ಸಿನಿಮಾಗಳು. ಇದರಿಂದ ಅಭಿಮಾನಿಗಳು ನೊಂದು ಕೊಂಡು ಸದಭಿರುಚಿಯ ಅಣ್ಣಾವ್ರ ಚಿತ್ರಗಳ ಹೆಸರಿನಲ್ಲಿ ಇವನ್ನು ನೋಡಲು ಬೇಸರವಾಗಿದೆಯೆಂದು ಹೇಳಿದ್ದಾರೆಂದು ವಿವರಿಸಿದ ರಾಘವೇಂದ್ರ ರಾಜ್‍ಕುಮಾರ್ ಅವರು ಅಭಿಮಾನಿಗಳು ಈ ಬಗ್ಗೆ ಸಹಿ ಸಂಗ್ರಹಣಾ ಅಭಿಯಾನ ಮಾಡಲಿ, ಅದರ ಅನ್ವಯ ತಾನು ವಾಣಿಜ್ಯ ಮಂಡಳಿ ಮುಂದೆ ಬೇಡಿಕೆ ಇಡುವುದಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here