ಕೆಲವು ದಿನಗಳ ಹಿಂದೆ ಹೊನ್ನಾಳಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಕಾರ್ಯಕ್ರಮವನ್ನು ದೊಡ್ಡೇರಿ ಗ್ರಾಮಸ್ಥರು ಆಯೋಜನೆ ಮಾಡಿದ್ದರು. ಆಗ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕ ರೇಣುಕಾಚಾರ್ಯ ಅವರನ್ನು ಕರೆಯಾಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಹೋಗಿದ್ದ ರೇಣುಕಾಚಾರ್ಯ ಅವರಿಗೆ ಹೋರಿಯೊಂದು ಇದ್ದಕ್ಕಿದ್ದಂತೆ ವೇಗವಾಗಿ ಓಡಿ ಬಂದು ಡಿಚ್ಚಿ ಹೊಡೆದು ಆ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು. ಈಗ ಅದೇ ವಿಷಯವಾಗಿ ಸಿಎಂ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಬೈದ ಹಾಗೂ ವ್ಯಂಗ್ಯ ಮಾಡಿದಂತಹ ಸನ್ನಿವೇಶವೊಂದು ನಡೆದಿದೆ‌.

ಇಂದು ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೂ ಗುಚ್ಛ ಒಂದನ್ನು ನೀಡಲು ಹೋದ ಶಾಸಕ ಎಂ.ಪಿ.ರೇಣುಕಾಚರ್ಯ ಅವರು ಸಿಎಂ ಅವರಿಂದ ಬೈಗಳು ತಿಂದಿದ್ದಾರೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಅದಕ್ಕೂ ಮೊದಲು ಶಾಸಕ ರೇಣುಕಾಚಾರ್ಯ ತಮ್ಮ ಆಪ್ತ ಸಹಾಯಕನ ಜೊತೆ ಸಿಎಂ ಯಡಿಯೂರಪ್ಪ ಅವರನ್ನು ಅವರ ಕೊಠಡಿಗೆ ಹೋಗಿ ಭೇಟಿ ಮಾಡಿದ್ದರಾದರೂ, ಸಿಎಂ ಅವರು ಕೆಲಸದ ಒತ್ತಡದಲ್ಲಿ ಇದ್ದುದ್ದರಿಂದ ತಾವು ತಂದಿದ್ದ ಹೂಗುಚ್ಚ ಕೊಡಲು ಅವಕಾಶ ಸಿಕ್ಕಿರಲಿಲ್ಲ.

ಅಷ್ಟಕ್ಕೇ ಸುಮ್ಮನಾಗದ ರೇಣುಕಾಚಾರ್ಯ ಅವರು ಸಿಎಂ ಸುದ್ದಿಗೋಷ್ಠಿ ನಡೆಸುವಾಗಲೇ, ಅಲ್ಲಿ ಮಧ್ಯೆ ಪ್ರವೇಶಿಸಿ ಹೂಗುಚ್ಚ ಕೊಡಲು ಮುಂದಾದರು. ಇದರಿಂದ ಸಿಡಿ ಮಿಡಿಗೊಂಡ ಸಿಎಂ ಯಡಿಯೂರಪ್ಪ, “ಏನೋ ನೀನೇನೋ ಮಧ್ಯದಲ್ಲಿ ಬಂದು ಹಿಡ್ಕೊಂಡು ನಿಂತಿದ್ದಿಯಲ್ಲೋ. ಕೊಡೋ ಹಾಗಿದ್ದರೆ ಕೊಡಲೇ. ಅಲ್ಲಿ ಊಟ ಮಾಡ್ತ ಇದ್ದೇ ತಾನೇ ಮಾಡ ಹೋಗ. ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ” ಎಂದು ಹೇಳಿದರು. ಸಿಎಂ ಅವರು ಹೇಳಿರುವ ಮಾತು ಅತ್ತ ವ್ಯಂಗ್ಯ ಕೂಡಾ ಮಾಡಿದಂತಿದೆ. ಒಟ್ಟಿನಲ್ಲಿ ಹೂಗುಚ್ಛ ನೀಡಲು ಹೋಗಿ ನಗೆಪಾಟಲಾದರು ರೇಣುಕಾಚಾರ್ಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here