ರಾಜ್ಯ ರಾಜಕಾರಣದಲ್ಲಿ ಒಂದು ಅನಿಶ್ಚಿತತೆ ಇದೆ. ಶಾಸಕರು ಹಾಗೂ ಸಚಿವರ ರಾಜೀನಾಮೆಯಿಂದ ರಾಜಕೀಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಮೈತ್ರಿ ನಾಯಕರೆಲ್ಲರೂ ಕೂಡಾ ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚನೆ ಹಾಗೂ ಆಚರಣೆಯಲ್ಲಿ ಬಹಳ ಶ್ರಮವಹಿಸುತ್ತಾ ಪರದಾಡುತ್ತಿದ್ದಾರೆ. ಆದರೆ ಸೂಪರ್ ಸಿಎಂ ರೇವಣ್ಣ ಅವರು ಮಾತ್ರ ಇದಾವುದರ ಬಗ್ಗೆ ಚಿಂತೆ ಇಲ್ಲದೆ ನಿರಾಳವಾಗಿದ್ದಾರೆ ಎನ್ನಲಾಗಿದೆ. ರೇವಣ್ಣನವರು ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ರೇವಣ್ಣನವರು ಅಂತಹ ಯಾವ ಕೆಲಸದಲ್ಲಿ ಮಗ್ನರಾಗಿದ್ದಾರೆಂಬುದು ಎಲ್ಲರ ಪ್ರಶ್ನೆ. ‌

ರೇವಣ್ಣನವರು ಪ್ರಮೋಷನ್ ಮಾಡಿಸುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಅವರು ಒಂದಲ್ಲಾ, ಎರಡಲ್ಲ ಬದಲಿಗೆ ಸುಮಾರು 700 ಮಂದಿಗೆ ಪ್ರಮೋಷನ್ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಒಂದೊಂದು ಪ್ರಮೋಷನ್ ಗೆ ಸುಮಾರು 5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬುದಾಗಿ ಆರೋಪವನ್ನು ಕೂಡಾ ಮಾಡಿದ್ದಾರೆ ಎನ್ನಲಾಗಿದೆ. ಅದರ ನಡುವೆಯೂ ಈ ಪ್ರಮೋಷನ್ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.

ಪ್ರಮೋಷನ್ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು, ಇತ್ತೀಚಿಗಷ್ಟೇ 90 ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಿದ್ದ ರೇವಣ್ಣನವರು, ಹಿಂಬಡ್ತಿ ಪಡೆದವರಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಿದ್ದಾರೆ ಎಂದು ಕೂಡಾ ಕೇಳಿ ಬಂದಿದೆ. ಈಗ ಮತ್ತೊಮ್ಮೆ ಸುಮಾರು 700 ಜನರ ವರ್ಗಾವಣೆ ಪಟ್ಟಿಯನ್ನು ಆತುರಾತುರವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸರ್ಕಾರದಲ್ಲಿ ಎಲ್ಲವೂ ಹೇಗೆ ನಡೆಯುತ್ತಿದೆ ಎಂಬುದೇ ಒಂದು ಗೊಂದಲವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here