ಬೆಂಗಳೂರು, ಸೆ. : ಬಿಜೆಪಿ ಪಕ್ಷದ ಸಾಮ್ರಾಟ ಆರ್ ಅಶೋಕ್ ವಿಧಾನಸಭಾ ಕ್ಷೇತ್ರ ಪದ್ಮನಾಭನಗರದಲ್ಲಿ ಕಾಂಗ್ರೆಸ್ ನಾಯಕರು ತರಾತುರಿಯಲ್ಲಿ ಮಾಜಿ ಕಾರ್ಪೊರೇಟ್ ಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಇದೀಗ ಅಶೋಕ್ ಅವರು ರಿವರ್ಸ್ ಆಪರೇಷನ್ ಮಾಡಿದ್ದರಿಂದ ಕಾಂಗ್ರೆಸ್ ಸೇರಿದ ಮಾಜಿ ಕಾರ್ಪೊರೇಟ್ಗಳು ಇದೀಗ ಬಿಜೆಪಿ ಪಕ್ಷಕ್ಕೆ ಮತ್ತೆ ಮರಳಿದ್ದಾರೆ.
ಎಂಟು ಮಂದಿ ಮಾಜಿ ಕಾರ್ಪೊರೇಟರ್ಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇವರಲ್ಲಿ ಮೂರು ಜನ ಮತ್ತೆ ಬಿಜೆಪಿಗೆ ಆಗಮಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಸ್ಥಳೀಯ ಮಟ್ಟದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ ಇವರಿಗೆ ಕಾರ್ಪೊರೇಟ್ ಟಿಕೆಟ್ ಘೋಷಣೆ ಮಾಡಿದ್ದು ಮೂಲ ಕಾಂಗ್ರೆಸ್ಸಿಗರ ಸಮಾಧಾನಕ್ಕೆ ಕಾರಣವಾಗಿದೆ.
ಅಲ್ಲದೆ ಬಿಜೆಪಿ ಪಕ್ಷದಿಂದ ಬಂದ ಇವರು ಪ್ರತ್ಯೇಕ ಸಭೆ ನಡೆಸುತ್ತಿರುವುದು ಹಾಗೂ ಪಕ್ಷದ ಸಂಘಟನೆಯಲ್ಲಿ ಒಮ್ಮತ ಮೂಡದ ಕಾರಣ, ಕಾಂಗ್ರೆಸ್ ಕಾರ್ಯಕರ್ತರ ಜೊತೆ ಇಲ್ಲದೆ ಇರುವುದರಿಂದ ಈ ರೀತಿ ಕಿರಿಕಿರಿ ಉಂಟಾಗಿ ಮೂಲ ಕಾಂಗ್ರೆಸ್ಸಿಗರು ಇದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್ನಲಾಗುತ್ತಿದೆ.
ಕಾಂಗ್ರೇಸ್ ಸೇರಿದ್ದ ವೆಂಕಟಸ್ವಾಮಿ ರೆಡ್ಡಿ, ಸುಪ್ರಿಯ ಶೇಖರ್, ಹಾಗೂ ಶೋಭಾ ಆಂಜಿನಪ್ಪ ಇದೀಗ ಆರ್.ಅಶೋಕ ಅವರ ರಿವರ್ಸ್ ಆಪರೇಷನ್ ನಿಂದ ಬಿಜೆಪಿಗೆ ವಾಪಸಾಗಿದ್ದಾರೆ ಎನ್ನಲಾಗುತ್ತಿದೆ.ಅದರಂತೆ ಶಾಸಕ ಎಸ್.ಟಿ ಸೋಮಶೇಖರ್ ಅವರ ಕ್ಷೇತ್ರ ಕೂಡ ಹೊರತಾಗಿಲ್ಲ ಕಳೆದ ಕೆಲವು ದಿನಗಳ ಹಿಂದೆ ಯಶವಂತಪುರದ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಿದ್ದರು ಇದೀಗ ಅವರು ಕೂಡ ಮತ್ತೆ ಬಿಜೆಪಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.