ಭಾರತೀಯ ಕ್ರಿಕೆಟ್ ತಂಡದ ಕ್ರಿಕೆಟಿಗರು ಸದಾಕಾಲ ಕ್ರಿಕೆಟ್ ಅಥವಾ ಇನ್ನಾವುದೇ ಸಮಾರಂಭದಲ್ಲಿ ಜೊತೆಯಾಗಿ ಭಾಗವಹಿಸುವುದು ಸಾಮಾನ್ಯ. ಅದೇ ರೀತಿ ಎಲ್ಲರೂ ಒಟ್ಟಿಗೆ ಸೇರಿದಾಗ ಅಲ್ಲಿನ ಸಂಭಮವೇ ಬೇರೆ . ಅದರಲ್ಲೂ ಟೀಂ ಇಂಡಿಯಾ ಆಟಗಾರರ ಪೈಕಿ ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಝೀವಾ ಧೋನಿ ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಪುತ್ರಿ ಝೀವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗ್ತಿದ್ದಾಳೆ. ಈಗ ಯುವ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಜೊತೆ ಇರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಈ ವೀಡಿಯೋ ನೋಡಿದ ಧೋನಿ ಅಭಿಮಾನಿಗಳು ‘ಝೀವಾ ಈಸ್ ಸೋ ಕ್ಯೂಟ್’ ಅಂತಿದ್ದಾರೆ. ಧೋನಿ ಪುತ್ರಿ ಝೀವಾ ಧೋನಿ, ಕ್ರಿಕೆಟ್ ಆಟಗಾರ ರಿಷಬ್ ಪಂತ್‍ಗೆ ಹಿಂದಿ ಭಾಷೆಯ ವರ್ಣಮಾಲೆ ಹೇಳಿಕೊಟ್ಟಿದ್ದಾರೆ. ಅ, ಆ, ಇ, ಈ ಅಂತಾ ಆಕ್ಷನ್ ಮಾಡಿಕೊಂಡು ಝೀವಾ ಹೇಳಿಕೊಳ್ಳುತ್ತಿರುವ ವರ್ಣಮಾಲೆ ಸಿಕ್ಕಾಪಟ್ಟೆ ಕ್ಯೂಟ್ ಆಗಿದ್ದು, ಝೀವಾಳ ಕ್ಯೂಟ್ನೆಸ್ ಗೆ ಪಂತ್ ಕ್ಲೀನ್ ಬೋಲ್ಡ್ ಆಗಿದ್ದಾರೆ.ಪಾ

ಠ ಕಲಿತ ಬಳಿಕ ರಿಷಬ್ ಪಂತ್ ಅವರು ಝೀವಾಗೆ ಥ್ಯಾಂಕ್ಸ್ ಮೇಡಂ ಅಂದಿದ್ದಾರೆ. ಈ ವಿಡಿಯೋವನ್ನು ಝೀವಾ ಸಿಂಗ್ ಧೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಆ ವೀಡಿಯೋವನ್ನು ನೀವೂ ಸಹ ನೋಡಿ…

View this post on Instagram

Back to Basics !

A post shared by ZIVA SINGH DHONI (@ziva_singh_dhoni) on

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here