ಮೊನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಬೆಲ್ ಬಾಟಂ ಮೂಲಕ ನಾಯಕ‌ನಟನಾಗಿ ಸಹ ಹೆಸರು ಮಾಡಿದ ರಿಷಭ್ ಶೆಟ್ಟಿ ಅವರು ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾದ ಹೆಸರು ಅನೌನ್ಸ್ ಮಾಡಿ ಕುತೂಹಲ ಮೂಡಿಸಿತ್ತು. ಮುಂದಿನ ಸಿನಿಮಾಗೆ ರುದ್ರಪ್ರಯಾಗ ಎನ್ನುವ ವಿಭಿನ್ನ ಹೆಸರಿಟ್ಟು ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಿಸಿರುವ ರಿಷಭ್ ಶೆಟ್ಟಿ ಅವರು ಕಳೆದ ಕೆಲ ತಿಂಗಳುಗಳ ಹಿಂದೆ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಎಲ್ಲರ ಮನ ಗೆದ್ದಿದ್ದರು. ಇದೆಲ್ಲದರ ನಡುವೆಯೇ ರಿಷಭ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದ ಮೂಲಕ ಒಂದು ಹೊಸ ಪೋಸ್ಟ್ ಶೇರ್

ಮಾಡಿದ್ದಾರೆ ಅದರಲ್ಲಿ ರಿಷಭ್ ಶೆಟ್ಟಿ ಈ  ರೀತಿಯಾಗಿ ಬರೆದಿದ್ದಾರೆ. “ಹುಟ್ಟುಹಬ್ಬದ ಸಂಭ್ರಮಕ್ಕೆ ‘ಚೆರ್ರಿ ಆನ್ ದಿ ಕೇಕ್’ ಎಂಬಂತೆ, ಮಗನಿಗೆ ಮೂರು ತಿಂಗಳು ತುಂಬಿದ ಸಂತಸವು ಜೊತೆಯಾಗಿದೆ. ಈ ಹುಟ್ಟುಹಬ್ಬಕ್ಕೆ ತುಟಿಯರಳಿಸಿ ನಗುವ, ಈ ಮುದ್ದು ಕಂದನನ್ನು ಉಡುಗೊರೆಯಾಗಿ ಕೊಟ್ಟ ಪ್ರಗತಿ, ಅವನ ಪಾದಗಳ ಗುರುತಿನ ಜೊತೆಗೆ, ಅವನೇ ಸಹಿ ಮಾಡಿದ ಈ ಮುದ್ದಾದ ಪತ್ರವನ್ನೂ ನೀಡಿದ್ದಾಳೆ.

ಇದಕ್ಕಿಂತ ಹೆಚ್ಚಿನ ಖುಷಿಯನ್ನು ಜಗತ್ತಿನ ಮತ್ಯಾವ ಉಡುಗೊರೆಗಳೂ ನೀಡಲು ಸಾಧ್ಯವಿಲ್ಲ. ಮುಂದೆ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮನೆಯ ತುಂಬಾ ಓಡಾಡುವ ಕ್ಷಣಗಳಿಗಾಗಿ ಕಾತರದಿಂದ ಕಾಯುತ್ತಾ, ಈ ದಿನದ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here