ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಅಂತಹ ಸುಂದರ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ನಟ ರಿಷಿ ಅವರ ಮದುವೆ ದೂರದ ಚೆನ್ನೈನಲ್ಲಿ ನಡೆದಿದೆ. ಏಪ್ರಿಲ್​ನಲ್ಲಷ್ಟೇ ದೂರದ ಹೈದರಾಬಾದ್​ನಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸ್ವಾತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ಅವರ ವಿವಾಹ ಚೆನ್ನೈನಲ್ಲಿ ಭಾನುವಾರ ನೆರವೇರಿದೆ.

ಚೈನ್ನೈನ ಇಂಜಾಂಬಕಂನಲ್ಲಿನ ರೀನಾ ಸಭಾಂಗಣದಲ್ಲಿ ಸ್ವಾತಿ ಜತೆ ಸಪ್ತಪದಿ ತುಳಿದಿದ್ದಾರೆ. ನ.20ಕ್ಕೆ ಬೆಂಗಳೂರಿನ ಮೂನ್​ಗೇಟ್ ಇವೆಂಟ್ಸ್​ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ಗಣ್ಯರು ತಾಂತ್ರಿಕ ವರ್ಗ ಸೇರಿ ಆಪ್ತರು ಪಾಲ್ಗೊಳ್ಳಲಿದ್ದಾರೆ.

ಸದ್ಯ ರಿಷಿ ‘ಸಕಲಕಲಾವಲ್ಲಭ’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ರಾಮನ ಅವತಾರ’ ಸೇರಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here