ಬಿಗ್ ಬಾಸ್ ಸೀಸನ್ 7 ಮೂರ‌ನೇ ಎಲಿಮಿನೇಷನ್ ನಿನ್ನೆಯಷ್ಟೇ ಆಗಿತ್ತು. ಬಹಳ ಆಶ್ಚರ್ಯಕರ ಎಂಬಂತೆ ನಟಿ ದುನಿಯಾ ರಶ್ಮಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅಲ್ಲಿಗೆ ಅವರ ಬಿಗ್ ಬಾಸ್ ಪಯಣ ಮುಕ್ತಾಯವಾಯಿತು.‌ ಅದಾದ ನಂತರ
ಶನಿವಾರದ ವಾರದ ಕತೆ ಕಿಚ್ಚನ ಜತೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ಈ ವಾರ ಒಂದು ಟ್ವಿಸ್ಟ್ ಇದೆ ಎಂದು  ಹೇಳಿದ್ದರು. ಆ ಟ್ವಿಸ್ಟ್ ಮತ್ತೇನೂ ಅಲ್ಲ, ಅದು ವೈಲ್ಡ್ ಕಾರ್ಡ್ ಎಂಟ್ರಿ.
ಆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಫೀವರ್ 104 FM ನ ಖ್ಯಾತ ಆರ್‌ಜೆ ಆಗಿರುವ ಪೃಥ್ವಿ ಬಿಗ್ ಬಾಸ್ ಮನೆಗೆ ವೈಲ್ಡ್ ಪ್ರವೇಶವನ್ನು ಮಾಡಿದ್ದಾಗಿದೆ.

ಆದರೆ ಇಲ್ಲಿ ರೋಚಕ ವಾದ ವಿಷಯ ಏನೆಂದರೆ, RJ ಪೃಥ್ವಿ ಅವರು ಮನೆಗೆ ಎಂಟ್ರಿಯಾದ ದಿನವೇ ಮನೆಯ ಇತರೆ ಸದಸ್ಯರೆಲ್ಲಾ ಸೇರಿ ಬಕರಾ ಮಾಡಿದ್ದಾರೆ. ಪೃಥ್ವಿ ಅವರು ಲಿವಿಂಗ್ ಏರಿಯಾದಲ್ಲಿ ಓಡಾಡುತ್ತಿರುವಾಗ, ಹರೀಶ್ ರಾಜ್ ಅವರು ಬಿಗ್ ಬಾಸ್ ಧ್ವನಿಯನ್ನು ಮಿಮಿಕ್ರಿ ಮೂಲಕ ನಕಲು ಮಾಡಿದ್ದಾರೆ. ಬಿಗ್ ಬಾಸ್ ಧ್ವನಿಯಲ್ಲಿ ಮಾತನಾಡುತ್ತಾ ಪೃಥ್ವಿ ಅವರು ಸ್ವಿಮ್ಮಿಂಗ್ ಪೂಲ್ ಗೆ ಹಾರಬೇಕು ಎಂದು ಹೇಳಿದ್ದಾರೆ. ಮನೆಯ ಇತರೆ ಸದಸ್ಯರು ಕೂಡಾ ಇದು ಬಿಗ್ ಬಾಸ್ ಆದೇಶ , ಹೇಳಿಕ ಕೂಡಲೇ ಮಾಡಬೇಕು, ನಿಮ್ಮ ಮೈಕ್ ತೆಗೆದು ಸ್ವಿಮ್ಮಿಂಗ್ ಪೂಲ್ ಒಳಗೆ ಧುಮುಕಿ ಎಂದು ಪೃಥ್ವಿ ಅವರಿಗೆ ಹೇಳಿದ್ದಾರೆ.

ಅಲ್ಲದೆ ಬಿಗ್ ಬಾಸ್ ಒಂದೇ ಸಲ ಆದೇಶ ನೀಡುವುದು, ಅದನ್ನು ಹೇಳಿದ ಕೂಡಲೇ ಮಾಡಬೇಕು ಎಂದು ಪೃಥ್ವಿ ಅವರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಪೃಥ್ವಿ ಅವರು ಅನುಮಾನದಿಂದ, ನನಗೆ ಸರಿಯಾಗಿ ಇನ್ನೊಂದು ಸಲ ಹೇಳಿ ಬಿಗ್ ಬಾಸ್ ಅಂದಾಗ ಹರೀಶ್ ರಾಜ್ ಅವರು ಮತ್ತೆ ಬಿಗ್ ಬಾಸ್ ಧ್ವ‌ನಿಯಲ್ಲಿ ಪೂಲ್ ಗೆ ಹಾರಲು ಹೇಳಿದಾಗ, ಪೃಥ್ವಿ ಅದನ್ನು ನಂಬಿ ಸ್ವಿಮ್ಮಿಂಗ್ ಪೂಲ್ ಒಳಗೆ ಧುಮುಕಿದ್ದಾರೆ. ಅವರು ಪೂಲ್ ಒಳಗೆ ಧುಮುಕಿದ ಮೇಲೆ ಮನೆಯ ಎಲ್ಲಾ ಸದಸ್ಯರು ನಗುತ್ತಾ ಅದು ಬಿಗ್ ಬಾಸ್ ಆದೇಶ ಅಲ್ಲ ಎಂದು ಹೇಳಿದಾಗ ಪೃಥ್ವಿ ಅವರಿಗೆ ತನನ್ನು ಎಲ್ಲಾ ಸೇರಿ ಆಟ ಆಡಿಸಿ, ಬಕ್ರಾ ಮಾಡಿದ್ದಾರೆ ಅಂತ ಅರ್ಥ ಆಗಿದೆ.

ಕೈಗೆ ಮೈಕ್ ಸಿಕ್ಕಿದ್ರೆ ಸಾಕು,ಇವರ ಧ್ವನಿಯೇ ಅದೇಷ್ಟೋ ಜನರ ಮನರಂಜಿಸುತ್ತೆ.. ಇನ್ಮುಂದೆ ಯಾವಾಗ್ಲೂ ಮೈಕ್ ಆನ್ ಆಗಿರುತ್ತೆ! ದುನಿಯಾ ಔಟ್ ಆಗಿ…

Colors Kannada यांनी वर पोस्ट केले रविवार, ३ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here