ಬಿಗ್ ಬಾಸ್ ಸೀಸನ್ 7 ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ್ದು, ಏಳನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡಾ ಮುಗಿದಿದೆ. ಏಳನೇ ವಾರದ ಅಂತ್ಯಕ್ಕೆ ಮನೆಯಿಂದ ಹೊರ ಬಂದವರು RJ ಪೃಥ್ವಿ. ಬಿಗ್ ಬಾಸ್ ನಲ್ಲಿ ಈಗಾಗಲೇ ಮೂರು ಜನ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿದ್ದಾರೆ. ಆದರೆ ಈ ಬಾರಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ನಾಲ್ಕನೇ ವಾರದಲ್ಲಿ ಮನೆಯೊಳಗೆ ಹೋದವರು ಇದೇ ಆರ್.ಜೆ.ಪೃಥ್ವಿ ಅವರು‌. ಹೊರಗೆ RJ ,ಆಗಿ ಸಾಕಷ್ಟು ಹೆಸರು ಗಳಿಸಿದ್ದ ಪೃಥ್ಚಿ ಅವರು ಮನೆಯಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿ ಆದ ಮೇಲೆ ಮನೆಯ ವಾತಾವರಣದಲ್ಲಿ ಬದಲಾವಣೆ ಆಗಲಿದೆ ಎಂದು ಎಲ್ಲರೂ ನಂಬಿದ್ದರು.

ಆದರೆ ಪೃಥ್ವಿ ಅವರ ಆಗಮನದಿಂದ ಮನೆಯೊಳಗೆ ಅಂತಹ ಬದಲಾವಣೆ ಏನೂ ಆಗಲಿಲ್ಲ. ಬದಲಿಗೆ ಪೃಥ್ವಿ ಅವರೇ ಮನೆಯ ಸದಸ್ಯರೊಡನೆ ಹೊಂದಾಣಿಕೆ ಮಾಡಿಕೊಂಡು ಸುಮ್ಮನಾಗಿ ಬಿಟ್ಟರು. ಆದರೆ ಜನರಿಗೆ ತಿಳಿಯದ ಅವರ ಮದುವೆ, ಸಿನಿಮಾ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಅವರು ಹಂಚಿಕೊಂಡರು.
ಪೃಥ್ವಿ ಅವರು ವಿಶೇಷ ಎನ್ನುವ ಯಾವುದೇ ಪ್ರದರ್ಶನ ನೀಡಲಿಲ್ಲ. ಅದಕ್ಕೆ ಈ ವಾರ ನಾಮಿನೇಟ್ ಆದವರಲ್ಲಿ ಎಲ್ಲರಿಗಿಂತ ಕಡಿಮೆ ಓಟು ಪಡೆದು ಮನೆಯಿಂದ ಹೊರಬಂದಿದ್ದಾರೆ ಆರ್.ಜೆ.ಪೃಥ್ವಿ. ಇವರು ಮನೆಯಲ್ಲಿ ಇದ್ದುದ್ದು ನಾಲ್ಕೇ ವಾರ ಆದರೂ ಭರ್ಜರಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬುದು ನಿಜ.

ಪೃಥ್ವಿ ಅವರು ತಾನು ಮನೆಯೊಳಗಿದ್ದ ಇದ್ದ ನಾಲ್ಕು ವಾರಕ್ಕೆ ಒಂದು ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಸಂಭಾವನೆಯನ್ನು ಜೇಬಿಗಿಳಿಸಿದ್ದಾರೆ. ಅವರಿಗೆ ವಾರಕ್ಕೆ 30 ಸಾವಿರದಂತೆ ನಾಲ್ಕು ವಾರಗಳಿಗೆ ಒಟ್ಟು ಸಂಭಾವನೆಯಾಗಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಬಿಗ್ ಬಾಸ್ ನೀಡಿದೆ ಎಂದು ಹೇಳಲಾಗಿದೆ. ಮೂರು ವೈಲ್ಡ್ ಕಾರ್ಡ್ ಎಂಟ್ರಿ ಗಳಲ್ಲಿ ಮೊದಲನೆಯದು ಹೊರ ಬಂದಿದೆ. ಇನ್ನು ಮನೆಯಲ್ಲಿ ರಕ್ಷಾ ಸೋಮಶೇಖರ್ ಹಾಗೂ ಚೈತ್ರ ಕೊಟ್ಟೂರು ಅವರು ಉಳಿದಿದ್ದು, ಇವರು ಕೂಡಾ ಪೃಥ್ವಿ ಅವರಂತೆ ಹೊರ ಬರುವರೋ ಅಥವಾ ಕೊನೆಯವರೆಗೂ ಉಳಿಯುವರೋ ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here