ಸಾಮಾನ್ಯವಾಗಿ ರಸ್ತೆಗಳಲ್ಲಿ ಅಥವಾ ಆಟೋ ಹಾಗೂ ಕಾರುಗಳಲ್ಲಿ ಸಂಚರಿಸುವಾಗ ಮೊಬೈಲ್ ಅಥವಾ ಇನ್ನಾವುದೋ ವಸ್ತುಗಳು ಸಿಕ್ಕರೆ ಕೆಲವರು ಅವುಗಳನ್ನು ತಾವೇ ಉಪಯೋಗಿಸಿಕೊಳ್ಳುವುದು ಸಾಮಾನ್ಯ .ಇನ್ನೂ ಕೆಲವರು ಮಾನವೀಯತೆ ದೃಷ್ಟಿಯಿಂದ ಸಿಕ್ಕ ವಸ್ತುಗಳನ್ನು ಅದರ ಮಾಲೀಕರಿಗೆ ತಲುಪಿಸುತ್ತಾರೆ.ಮತ್ತೆ ಕೆಲವರು ಪೋಲೀಸ್ ಠಾಣೆಗೆ ತಂದು ಕೊಟ್ಟು ಮಾನವೀಯತೆ ಮೆರೆಯುತ್ತಾರೆ. ಆದರೆ ಹಾಗೆ ಪರರ ವಸ್ತುಗಳನ್ನು ತಂದು ಪೋಲೀಸ್ ಠಾಣೆ ತಲುಪಿಸುವ ವ್ಯಕ್ತಿಗಳಿಗೆ ಯಾರಾದರೂ ಸನ್ನಾನ ಮಾಡುವುದನ್ನು ನೋಡಿದ್ದೀರ ? ಹೌದು ಇಂದು ನಮ್ಮ ಬೆಂಗಳೂರಿನ ಖಡಕ್ ಪೋಲೀಸ್ ಅಧಿಕಾರಿಯಾದ ರವಿ ಡಿ ಚೆನ್ನಣ್ಣನವರ್ ಅವರು

ಇಂದು ಕೆಂಪೇಗೌಡ ಬಸ್ ನಿಲ್ದಾಣದ ಬಳಿ‌ ಸಿಕ್ಕ ದುಬಾರಿ ಯು ಫೋನ್ ಅನ್ನು ಸೀದಾ ಪೋಲೀಸ್ ಠಾಣೆಗೆ ತಂದು ಒಪ್ಪಿಸಿದ ಹುಡುಗನಿಗೆ ಭರ್ಜರಿ ಸನ್ಮಾನ ಮಾಡಿ ಅವನಿಗೆ ಸೂಕ್ತ ಉಡುಗೊರೆ ಒಂದನ್ನು ನೀಡಿ ಅಚ್ಚರಿ ಮೂಡಿಸಿದರು. ಬೆಲೆ ಬಾಳುವ ವಸ್ತುಗಳು ಸಿಕ್ಕರೆ ಸಾಕು ಅದನ್ನು ಯಾರಿಗೂ ತಿಳಿಸದೇ ತಮ್ಮ ಜೇಬಿಗೆ ಹಾಕಿಕೊಳ್ಳುವವರೇ ಹೆಚ್ಚು. ಅಂತಹದರಲ್ಲಿ ಯುವಕರೊಬ್ಬರು ತನೆಗೆ ಸಿಕ್ಕ ಬೆಲೆ ಬಾಳುವ ಐಫೋನ್ ನನ್ನು ಪೊಲೀಸರಿಗೆ ಒಪ್ಪಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ಕೆಂಪೇಗೌಡ ಬಸ್ ನಿಲ್ದಾಣದ ಬಳಿ 60 ಸಾವಿರ ರೂ. ಮೌಲ್ಯದ ಐಫೋನ್ ಮೊಬೈಲ್ ಚಂದ್ರಕುಮಾರ್ವ ಠಾಣೆಗೆ ತಲುಪಿಸಿದ್ದಾರೆ. ಈ ಕಾರ್ಯವನ್ನು ಪ್ರಶಂಸಿದ ಪಶ್ಚಿಮ ವಿಭಾಗ ಡಿಸಿಪಿ ರವಿ ಚೆನ್ನಣ್ಣನವರ ಅವರು ಚಂದ್ರಕುಮಾರ್ ಗೆ ಗೌರವ ಪತ್ರದೊಂದಿಗೆ ಸನ್ಮಾನಿಸಿದ್ದಾರೆ.ಇದೊಂದು ಸಾರ್ವಜನಿಕರಿಗೆ ಒಳ್ಳೆ ಸಂದೇಶ ಅನ್ನೊದನ್ನ ಕೂಡ ಹೇಳಿದ್ದಾರೆ. ಇದೀಗ ಚಂದ್ರಕುಮಾರ್ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಒಳ್ಳೆ ಪ್ರಶಂಸೆ ವ್ಯಕ್ತವಾಗುತ್ತಿದೆ.ಹೀಗೆ ಸಿಕ್ಕ ವಸ್ತುಗಳನ್ನು ತಂದು ಪೋಲೀಸ್ ಠಾಣೆಗೆ ತಂದು ಕೊಟ್ಟವರಿಗೆ ಸನ್ಮಾನ ಮಾಡುವುದರಿಂದ ಯುವಕರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸ್ಪೂರ್ತಿದಾಯಕ ಆಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here