ಬೆಂಗಳೂರಿನ ನೆಲಮಂಗಲ ಹೈವೇ ನಿನ್ನೆ ಒಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೋಟಾರ್ ವಾಹನ ಸವಾರರಿಗೆ ಘಟನೆಯು ಭರ್ಜರಿ ಮನರಂಜನೆ ನೀಡುವುದರೊಂದಿಗೆ , ಆ ಘಟನೆ ಪಡೆದ ರೋಚಕ ತಿರುವು ಎಲ್ಲರಿಗೂ ಆಶ್ಚರ್ಯ ಹಾಗೂ ನಂಬಲಸಾಧ್ಯವಾದುದಾಗಿದೆ. ಈ ರೋಚಕ ಹಾಗೂ ಅಸಾಮಾನ್ಯ ಘಟನೆ, ಒಬ್ಬ ಮಹಿಳೆಗಾಗಿ ಇಬ್ಬರು ಪುರುಷರು ರಸ್ತೆಯಲ್ಲಿ ನಡೆಸಿದ ಜಗಳ, ಆದರೆ ಆ ಘಟನೆಯ ಅಂತ್ಯ ಮಾತ್ರ ಮತ್ತಷ್ಟು ಕುತೂಹಲ ಹಾಗೂ ಅನಿರೀಕ್ಷಿತವಾಗಿದ್ದು, ಆ ರೋಚಕ, ಅಸಾಮಾನ್ಯ ಹಾಗೂ ವಿಚಿತ್ರ ಘಟನೆಯ ವಿವರ ನಿಮಗಾಗಿ ಇಲ್ಲಿದೆ.

ತುಮಕೂರು ಹಾಗೂ ನೆಲಮಂಗಲ ಹೆದ್ದಾರಿಯಲ್ಲಿ ಬಾವಿ ಕೆರೆ ಕ್ರಾಸ್ ಎಂಬ ಸಣ್ಣ ಹಳ್ಳಿ ಇದ್ದು, ನಿನ್ನೆ ಬೆಳಿಗ್ಗೆ ೧೧ ಗಂಟೆಯ ಹೊತ್ತಿನಲ್ಲಿ , ಬೆಂಗಳೂರು ಕಡೆಗೆ ಟ್ರಾಫಿಕ್ ಸ್ವಲ್ಪ ನಿಧಾನವಾಯಿತು. ಇದಕ್ಕೆ ಅಕರಣ ರಸ್ತೆಯಲ್ಲಿ ನಡೆಯುತ್ತಿದ್ದ ಒಂದು ವಿಚಿತ್ರ ಸನ್ನಿವೇಶವನ್ನು ನೋಡಲು ವಾಹನ ಚಾಲಕರು ತಮ್ಮ ವಾಹನಗಳನ್ನು ನಿಧಾನ ಗತಿಯಲ್ಲಿ ನಡೆಸುತ್ತಿದ್ದರು. ಕೆಲವರಂತೂ ತಮ್ಮ ವಾಹನಗಳನ್ನು ನಿಲ್ಲಿಸಿ ಆ ದೃಶ್ಯ ನೋಡಲು ತೊಡಗಿದ್ದರು. ಅಲ್ಲಿ ಶಶಿಕಲಾ ಎಂಬ ಮಹಿಳೆಗೋಸ್ಕರ ಇಬ್ಬರು ಪುರುಷರು ರಸ್ತೆಯಲ್ಲಿ ಜಟಾಪಟಿ ನಡೆಸುತ್ತಿದ್ದರು ಎನ್ನಲಾಗಿದೆ. ಕೆಲವರು ಅವರನ್ನು ತಡೆಯಲು ಪ್ರಯತ್ನಿಸಿದರೂ ಅದು ವಿಫಲವಾಯಿತು. ಅವರ ಈ ಜಗಳಕ್ಕೆ ಕಾರಣ ಏನೆಂದು ಆಳವಾಗಿ ತಿಳಿದಾಗ ಹೊರ ಬಂದ ಸತ್ಯ ಎಲ್ಲರನ್ನೂ ದಂಗು ಬಡಿಸುವಂತದ್ದು.

ಶಶಿಕಲಾ ಎಂಬ ಮಹಿಳೆ ಚಿಕ್ಕ ಬಿದಿರುಕಲ್ಲಿನ ಮೂರ್ತಿ ಎಂಬುವವರೊಂದಿಗೆ ವಾಸಿಸುತ್ತಿದ್ದು, ಆತ ಟ್ರಾಕ್ಟರ್ ಚಾಲಕನಾಗಿದ್ದಾನೆ. ಆದರೆ ಶಶಿಕಲಾಗೆ 2000 ಇಸವಿಯಲ್ಲೇ ರಂಗಸ್ವಾಮಿ ಎಂಬಾತನೊಂದಿಗೆ ಮದುವೆಯಾಗಿ 2010 ರಲ್ಲಿ ಆಕೆ ಗಂಡನನ್ನು ಬಿಟ್ಟು,ಗಾರ್ಮೆಂಟ್ ಸೂಪರ್ ವೈಸರ್ ಆದ ರಮೇಶ್ ಕುಮಾರ್ ಎಂಬಾತನೊಂದಿಗೆ ಜೀವನ‌ ಆರಂಭಿಸಿದ್ದಾಳೆ. ಆದರೆ ಕೇವಲ ಆರು ತಿಂಗಳಲ್ಲೇ ಕುಮಾರ್ ಜೊತೆ ಸಂಬಂಧ ಕಡೆದುಕೊಂಡು, ಬೇರೊಬ್ಬ ಪುರುಷನ ಜೊತೆ ಜೀವನ ಆರಂಭಿಸಿದ್ದಾಳೆ. ಕಾರಣಾಂತರಗಳಿಂದ ಅಲ್ಲಿ ಕೂಡಾ ಜೀವನ ನಡೆಸಲಾಗದೆ, ಕಡೆಗೆ ಚಿಕ್ಕಬಿದಿರುಕಲ್ಲಿನ ಮೂರ್ತಿ ಎಂಬುವವರೊಂದಿಗೆ ಈಗ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ವಿಷಯ ಹೀಗಿರುವಾಗ ಶಶಿಕಲಾ‌ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ ನ‌ ಕ್ಯಾಬ್ ಡ್ರೈವರ್ ಸಿದ್ದರಾಜು ಎಂಬ ಅವಿವಾಹಿತ, ಶಶಿಕಲಾಳಿಗೆ ಮದುವೆ ಪ್ರಸ್ತಾಪ ಮಾಡಿದ್ದು , ಶಶಿಕಲಾ ವಿವಾಹಿತನಾದ ಮೂರ್ತಿಯನ್ನು ಬಿಟ್ಟು, ಸಿದ್ದರಾಜುವನ್ನು ಮದುವೆಯಾಗಲು ಒಪ್ಪಿದ್ದಾಳೆ. ನಿನ್ನೆ ಸಿದ್ದರಾಜು ಮತ್ತು ಶಶಿಕಲಾ ಬಸ್ ನಿಲ್ಲಾಣದಲ್ಲಿ ನಿಂತು ಮಾತನಾಡುವಾಗ ಅಲ್ಲಿಗೆ ಬಂದ ಮೂರ್ತಿ ಹಾಗೂ ಸಿದ್ದರಾಜು ನಡುವೆ ಮಾತಿಗೆ ಮಾತು ಬೆಳೆದು, ಹೊಡೆದಾಟ ನಡೆಸಿದ್ದಾರೆ. ಜನರೆಲ್ಲಾ ವಿಷಯ ಏನೆಂದು ತಿಳಿದು ದಂಗಾದರೆ, ಮತ್ತೆ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದಾರೆ. ನೆಲಮಂಗಲ ಪೋಲಿಸ್ ಬಂದ ಮೇಲೆ ಜಗಳ ಕೊನೆಗೊಂಡಿದ್ದು, ಪೋಲಿಸ್ ಇಬ್ಬರಲ್ಲಿ ಯಾರನ್ನು ಮದುವೆಯಾಗುವೆ ಎಂದರೆ ಯಾರನ್ನೂ ಅಲ್ಲ ಎಂದಿದ್ದಾಳೆ. ಕಡೆಗೆ ಅಲ್ಲಿಗೆ ಬಂದ ಒಬ್ಬ ಪುರುಷನನ್ನು ತನ್ನ ಗೆಳೆಯನೆಂದು ಹೇಳಿ, ಇಬ್ಬರನ್ನೂ ಬಿಟ್ಟು ಅವನೊಂದಿಗೆ ಶಶಿಕಲಾ‌ ಜಾಗ ಖಾಲಿ ಮಾಡಿದ್ದಾಳೆ. ಮೂರ್ತಿ ಮತ್ತು ಸಿದ್ದರಾಜು ಮೇಲೆ ಕೇಸ್ ದಾಖಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here