ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೆಜಿಎಫ್ ಸಕ್ಸಸ್ ಸವಿಯುವ ಮೊದಲೇ ಸಂಕಷ್ಟ ಗಳು ಒಂದರ ಮೇಲೊಂದು ಎದುರಾಗುತ್ತಿವೆ. ಕಳೆದ ವಾರ ಐಟಿ ಶಾಕ್ ಗೆ ಒಳಗಾಗಿದ್ದ ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ ಮೂರು ದಿನಗಳ ಕಾಲ ಐಟಿ ಅಧಿಕಾರಿಗಳಿಂದ ಕಂಗೆಟ್ಟಿದ್ದ ಯಶ್ ಅವರು ಈ‌ ಬಾರಿ ಜನ್ಮದಿನದ ಸಂಭ್ರಮ ಸಹ ಸವಿಯಲಿಲ್ಲ. ನೋವಿನ ಮೇಲೆ ನೋವೆಂಬಂತೆ ಅಪ್ಪಟ ಅಭಿಮಾನಿಯ ಸಾವು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮರೆಯಲಾರದ ನೋವು ನೀಡಿತ್ತು. ಇದೀಗ  ರಾಕಿಂಗ್ ಸ್ಟಾರ್ ಯಶ್ ಅವರ  ಆಡಿಟರ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶೇಷಾದ್ರಿಪುರಂನಲ್ಲಿರುವ ಆಡಿಟರ್ ಬಸವರಾಜ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಆಡಿಟರ್ ಬಸವರಾಜ್ ಅವರು ನಟ ಯಶ್ ಹಾಗೂ ಹಲವು ನಿರ್ಮಾಪಕರು, ನಟರಿಗೆ ಆಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು‌‌ ದಾಳಿ ನಡೆಸಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ನಾಲ್ವರು ಐಟಿ ಅಧಿಕಾರಿಗಳ ತಂಡ ಒಂದು ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ದಾಳಿ ವೇಳೆ ಆಡಿಟರ್ ಬಸವರಾಜ್ ಕಚೇರಿಯಲ್ಲೇ ಇದ್ದರು ಎಂದು ತಿಳಿದುಬಂದಿದೆ.ಇಂದು ಸಂಜೆ ಸುಮಾರು 6 ಗಂಟೆಗೆ ನಾಲ್ವರು ಐಟಿ ಅಧಿಕಾರಿಗಳ ತಂಡ ಇನ್ನೋವಾ ಕಾರಿನಲ್ಲಿ ಬಂದು

ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಸವರಾಜ್ ಕಚೇರಿಯಲ್ಲಿದ್ದರು ಎಂದು ತಿಳಿದು ಬಂದಿದೆ.ಆಡಿಟರ್ ಬಸವರಾಜ್ ಅವರು ನಟ ಯಶ್ ಹಾಗೂ ಹಲವು ನಿರ್ಮಾಪಕರು, ನಟರಿಗೆ ಆಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು‌‌ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here