ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮಗಳ ಹುಟ್ಟು ಹಬ್ಬ ಮೊನ್ನೆ ಮೊನ್ನೆಯಷ್ಟೇ ಬಹಳ ಅದ್ಧೂರಿಯಾಗಿ ನಡೆದಿದ್ದು ಮಾತ್ರವಲ್ಲದೇ ಬಹುತೇಕ ಸ್ಯಾಂಡಲ್ ವುಡ್ ಒಂದೆಡೆ ಸೇರಿ ಖುಷಿಯನ್ನು ಹಂಚಿಕೊಂಡಿದ್ದು ನಮಗೆಲ್ಲಾ ತಿಳಿದೇ ಇದೆ. ಇನ್ನೂ ಈ ಸ್ಟಾರ್ ದಂಪತಿಯ ಮಗಳು ಐರಾ ಕೂಡಾ ಸ್ಟಾರ್ ಕಿಡ್ ಎನಿಸಿಕೊಂಡಿದ್ದು , ಯಶ್ ಮತ್ತು ರಾಧಿಕಾ ಅವರು ಎಲ್ಲಿಗೆ ಹೋದರೂ ಎಲ್ಲರೂ ಐರಾ ಬಗ್ಗೆ ವಿಚಾರಿಸುವುದು ಕೂಡಾ ಸಾಮಾನ್ಯ ಎನಿಸಿದೆ. ಇನ್ನು ಈ ವಿಚಾರವಾಗಿ ಈಗ ರಾಕಿಂಗ್ ಸ್ಟಾರ್ ಒಂದು ಹೇಳಿಕೆಯನ್ನು ನೀಡಿದ್ದಾರೆ. ಅಂದರೆ ಅಭಿಮಾನಿಗಳಿಗೆ ಈ ಮೂಲಕ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನನ್ನ ಮಕ್ಕಳು ಎಂದು ಗೌರವ ಕೊಡೋದು ಬೇಡ, ಅವರು ಏನಾದರೂ ಸಾಧನೆ ಮಾಡಿದರೆ ಆಗ ಗೌರವ ಕೊಡಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಒಂದು ಕಿವಿ ಮಾತನ್ನು ಹೇಳಿದ್ದಾರೆ. ಅವರು ಮಾತನಾಡುತ್ತಾ ನಾನು ಎಲ್ಲೇ ಹೋದ್ರು ಐರಾ ಬಗ್ಗೆ ಕೇಳುತ್ತಾರೆ. ಅದು ಮಾತ್ರವಲ್ಲ ಅವಳನ್ನು ನೋಡಲು ಅಭಿಮಾನಿಗಳು ಮನೆಯ ಬಳಿ ಕೂಡಾ ಬರುತ್ತಾರೆ ಎನ್ನುವ ವಿಚಾರದ ಬಗ್ಗೆ ಕೂಡಾ ಯಶ್ ಅವರು ಮಾತನಾಡಿದ್ದಾರೆ.

ಹಾಗೆ ಮನೆಯ ಬಳಿ ಬರುವುದು ಸರಿಯಲ್ಲ. ಈ ರೀತಿ ಮಾಡಬೇಡಿ. ಎಷ್ಟೇ ದೊಡ್ಡ ಸೆಲೆಬ್ರಿಟಿಯ ಮಕ್ಕಳಾಗಲೀ, ಅದು ನನ್ನ ಮಗಳೇ ಆಗಿರಬಹುದು, ಯಾರೇ ಆದರೂ ಕೂಡಾ ಅವರು ಏನಾದರೂ ಒಂದು ಸಾಧನೆ ಮಾಡಿದರೆ ಆಗ ಗೌರವ ಕೊಡಿ ಎಂದು ಹೇಳಿದ್ದಾರೆ ರಾಕಿಂಗ್ ಸ್ಟಾರ್. ಯಶ್ ಅವರ ಈ ಮಾತು ಅಕ್ಷರಶಃ ಸತ್ಯವಾಗಿದೆ. ಸೆಲೆಬ್ರಿಟಿ ಗಳು ಇಂದು ಈ ಹಂತಕ್ಕೆ ಬರಲು ಅವರು ಮಾಡಿರುವ ಸಾಧನೆ ಕಾರಣ. ಅದೇ ರೀತಿ ಅವರ ಮಕ್ಕಳು ಕೂಡಾ ಏನಾದರೂ ಸಾಧನೆ ಮಾಡಿದಾಗ ಅಭಿಮಾನ ತೋರುವುದು, ಗೌರವಿಸುವುದು ಉತ್ತಮ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here