ರಾಕಿಂಗ್​ ಸ್ಟಾರ್​ ಯಶ್​ಗೆ ಅವರ ಸ್ಟಾರ್ ವ್ಯಾಲ್ಯೂ ಕೆಜಿಎಫ್ ನ ನಂತರ ಬದಲಾಗಿದೆ. ಅವರು ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಒಂದರ ಹಿಂದೆ ಮತ್ತೊಂದು ಪ್ರಶಸ್ತಿಗಳು ಅವರನ್ನು ಅರಸಿ ಬರುತ್ತಿವೆ. ಅದೇ ಪ್ರಶಸ್ತಿಗಳ ಸಾಲಿನಲ್ಲಿ ಈಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಯಶ್ ಅವರ ಪಾಲಾಗಿದೆ. ಯಶ್ ಅವರಿಗೆ ಪ್ರಮುಖ ಆನ್ಲೈನ್ ಡಿಜಿಟಲ್ ಮೀಡಿಯಾ ಆಗಿರುವ ಬಿಹೈಂಡ್ ವುಡ್ಸ್ ಒಂದು ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯಶ್ ಅವರಿಗೆ ಈಗ ಬಂದಿರುವ ಹೊಸ ಪ್ರಶಸ್ತಿ ಯಾವುದು ಎನ್ನುವುದಾದರೆ, ಅದು “ಸೆನ್ಸೇಷನ್ ಆಫ್ ಸೌತ್ ಇಂಡಿಯನ್ ಸಿನಿಮಾ” ಪ್ರಶಸ್ತಿಯಾಗಿದೆ‌.

ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ಸ್ ಕಾರ್ಯಕ್ರಮವು ಕಳೆದ 7ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ‌. ಈ ಬಾರಿ ಕೆಜಿಎಫ್ ಸಿನಿಮಾ ದೇಶದಾದ್ಯಂತ ಒಂದು ಹೊಸ ಸಂಚಲನ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಅದೇ ಹಿನ್ನೆಲೆಯಲ್ಲಿ ಕೆಜಿಎಫ್ ನ ರಾಕಿ ಭಾಯ್​ ಆಗಿ ತೆರೆಯ ಮೇಲೆ ಅಬ್ಬರಿಸಿದ್ದ ಯಶ್ ಅವರು ಸೆನ್ಸೇಷನ್ ಆಫ್ ಸೌತ್ ಇಂಡಿಯನ್ ಸಿನಿಮಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದಕ್ಷಿಣದ ಬಹುತೇಕ ಸೂಪರ್ ಸ್ಟಾರ್ ಗಳು ಹಾಜರಿದ್ದರು. ಟಾಲಿವುಡ್​ನ ಸ್ಟಾರ್ ನಟ ರಾಮ್ ಚರಣ್ ತೇಜಾ, ವಿಜಯ್ ದೇವರಕೊಂಡ, ಮಲಯಾಳಂನ ನಿವಿನ್ ಪೌಲಿ ಇತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ಕಾರ್ಯಕ್ರಮದಲ್ಲಿ ತೆಲುಗಿನ ಡಿಯರ್ ಕಾಮ್ರೇಡ್ ಚಿತ್ರದ ತನ್ನ ನಟನೆ ಹಾಗೂ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರಿಗೆ ಕೂಡಾ ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ ಪ್ರಶಸ್ತಿ ದೊರೆತಿದೆ.‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಚೆನ್ನೈ ಗೆ ತೆರಳಿದ್ದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೇರಿದ್ದರು. ತಮ್ಮ ಅಭಿಮಾನ ನಟನಿಗೆ ಅದ್ದೂರಿ ಸ್ವಾಗತವನ್ನು ಅಭಿಮಾನಿಗಳು ಕೋರಿದ್ದು, ಯಶ್ ಅವರ ಜೊತೆ ಸೆಲ್ಪಿ ಪಡೆಯಲು ಅಭಿಮಾನಿಗಳು ಮುಂದಾಗಿದ್ದು ಎಲ್ಲಾ ವಿಶೇಷವಾಗಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here