ಕಳೆದ ಮೂರು ದಿನಗಳಿಂದ ವಿವಿಧ ಪಕ್ಷಗಳ ನಾಯಕರ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡುತ್ತಿದ್ದಾರೆ.ಮೊನ್ನೆಯಷ್ಟೇ ಮೈಸೂರಿನಲ್ಲಿ ರಾಮದಾಸ್ ,ಸಾ ರಾ ಮಹೇಶ್ ಪರ ಮತಯಾಚನೆ ಮಾಡಿದ್ದ ರಾಕಿಂಗ್ ಸ್ಟಾರ್ ನೆನ್ನೆ ಹಾಸನದ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು.

ಇಂದು ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸತೀಶ್ ರೆಡ್ಡಿ ಪರ ರಾಕಿಂಗ್ ಸ್ಟಾರ್ ಯಶ್ ಚುನಾವಣಾ ಪ್ರಚಾರ ಮಾಡಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಬರುತ್ತಿದ್ದ ಸುದ್ಧಿ ತಿಳಿಯುತ್ತಿದ್ದಂತೇ ಬೊಮ್ಮನಹಳ್ಳಿ ಸರ್ಕಲ್ ನಲ್ಲಿ ಅಸಂಖ್ಯಾತ ಜನರು ಜಮಾಯಿಸಿದ್ದರು.

ಬೊಮ್ಮನಹಳ್ಳಿಾ ಸರ್ಕಲ್ ನಿಂದ ಆರಂಭವಾದ ಯಶ್ ರ್ಯಾಲಿ ಹೊಸರೋಡ್ ತನಕ ಸಾಗಿತು.ದಾರಿಯುದ್ದಕ್ಕೂ ಸಾವಿರಾರು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಯಶ್ ಜೊತೆ ಭಾಗವಹಿಸಿದ್ದರು.

ರಾಕಿಂಗ್ ಸ್ಟಾರ್ ಯಶ್ ಜೊತೆ ಬಿಜೆಪಿ‌ ಅಭ್ಯರ್ಥಿ ಸತೀಶ್ ರೆಡ್ಡಿ ಮೆರವಣಿಗೆಯಲ್ಲಿ ಭಾಗವಹಿಸಿದರು.ಇದೇ ವೇಳೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನಸವಾರರು ಸ್ವಲ್ಪ ಕಾಲ ಪರದಾಡಿದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here