ಕೆಜಿಎಫ್ ಈ ಹೆಸರು ಸದ್ಯ ಕನ್ನಡದಲ್ಲಿ ಭರ್ಜರಿ ಹೆಸರನ್ನು ಪಡೆದು, ಕನ್ನಡ ಚಿತ್ರರಂಗದತ್ತ ಭಾರತವು ನೋಡುವಂತೆ ಮಾಡಿದ ಕನ್ನಡ ಚಿತ್ರ. ವಿಶೇಷ ವೆಂದರೆ ಈ ಚಿತ್ರವು ಭಾರತದ ಐದು ಭಾಷೆಗಳಲ್ಲಿ ತಯಾರಾಗಿದ್ದು, ಈಗಾಗಲೇ ಟ್ರೈಲರ್ ರಿಲೀಸ್ ಗೆ ಮುನ್ನ ನಿರೀಕ್ಷೆಗಳ ಸಾಗರ ಸೃಷ್ಟಿಸಿದ್ದರೆ, ಟ್ರೈಲರ್ ರಿಲೀಸ್ ನಂತರ ಚಿತ್ರದ ಬಿಡುಗಡೆಗೆ ಹಾತೊರೆಯುವ ಸುನಾಮಿಯನ್ನೇ ಈ ಚಿತ್ರ ಸೃಷ್ಟಿಸಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಈ ಐದು ಭಾಷೆಗಳಲ್ಲಿ ಲಕ್ಷಾಂತರ ಜನರು ಈ ಚಿತ್ರದ ಟ್ರೈಲರ್ ನೋಡಿ ಬೆರಗಾಗಿದ್ದಾರೆ ಹಾಗೂ ಚಿತ್ರರಂಗದ ದಿಗ್ಗಜರು ಚಿತ್ರದ ಯಶಸ್ಸಿಗೆ ಹೃದಯಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಇದರ ಮೂಲದ ಪಂಚಭಾಷಾ ನಟನಾಗಲಿದ್ದಾರೆ.

ಇನ್ನು ಇಂದು ಚಿತ್ರದ ಹಾಡೊಂಡು ಆರು ಗಾಡಿಗೆ ರಿಲೀಸ್ ಆಗಿದೆ. ಚಿತ್ರದ ಟ್ರೈಲರ್ ಆ ಮಟ್ಟದ ಹವಾ ಸೃಷ್ಟಿಸಿದೆ ಎಂದ ಮೇಲೆ ಇನ್ನು ಈಗ ರಿಲೀಸ್ ಆಗಿರೋ ಜಾನೂ ಮುಂಬೈ ಕಾ ಜಾನೂ ಎಂಬ ಹಾಡು ಬಿಡುಗಡೆಯ ನಂತರ ಎಂತಹ ಅಬ್ಬರವನ್ನು ಎಬ್ಬಿಸಲಿದೆ ಎಂಬುದು ನೋಡಬೇಕಿದೆ. ಇನ್ನು ಈ ಹಾಡಿದ ಸಾಹಿತ್ಯ ರಚಿಸಿದವರು ನಾಗೇಂದ್ರ ಪ್ರಸಾದ್ ಅವರು. ಈ ಹಾಡಿನ ಸಾಹಿತ್ಯ ಇದೊಂದು ಪಕ್ಕಾ ಮಾಸ್ ಸಾಂಗ್ ಎಂಬುದನ್ನು ಹೇಳುತ್ತದೆ. ಅಲ್ಲದೆ ಸಾಹಿತ್ಯದಲ್ಲಿ ಬಳಸಲಾಗಿರುವ ಪದಗಳು ನಾಯಕನ ಸಾಮರ್ಥ್ಯವನ್ನು ಸವಿವರವಾಗಿ ವರ್ಣಿಸುವುದು ತಿಳಿಯುತ್ತದೆ.

ಹಾಡಿನ ಸಾಹಿತ್ಯ ಪವರ್ ಫುಲ್ ಆಗಿದ್ದು, ಮಾಸ್ ಹಾಗೂ ಕ್ಲಾಸ್ , ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಅವರ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಂಗ್ ಕೇಳುಗನ ಮನಸ್ಸಿನಲ್ಲಿ ಒಂದು ರೀತಿಯ ಜೋಷ್ ತುಂಬುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಶ್ ಅವರ ಕೆಜಿಎಫ್ ನ ಈ ಹಾಡು ಐದು ಭಾಷೆಗಳನ್ನು ಇಂದು ಬಿಡುಗಡೆ ಹೊಂದಿರುವುದು ಮತ್ತೊಂದು ವಿಶೇಷವಾಗಿದ್ದು, ಈ ಹಾಡು ತನ್ನ ಜೋಷ್ ಫುಲ್ ಲಿರಿಕ್ಸ್ ನೊಂದಿಗೆ ಎಲ್ಲರನ್ನು ರಂಜಿಸುತ್ತದೆ ಎಂಬುದಕ್ಕೆ ಅನುಮಾನವೇ ಬೇಡ.

KGF ಚಿತ್ರದ ಮೊದಲ ಹಾಡಿನ ಸಾಹಿತ್ಯ ಈ ರೀತಿಯಾಗಿದೆ. ಜಾನು ಮುಬೈ ಕಾ ಜಾನು ಮುಂಬೈ ಕಾ ಜಾನು ಮುಬೈ ಕಾ ಜಾನು ರೇ ಜಾಸ್ತಿ ತಲೆಕೆಟ್ರೆ ಜಲ್ಲಿ ಹೊಡೆದಂಗೆ ನೆತ್ತಿ ಹೊಡಿತಾನೆ ಭಾಗ್ ರೇ ಹೊರಗೆ ನೋಡಿದ್ರೆ ಪ್ಯೂರು ಬಂಗಾರ ಉಜ್ಜಿ ನೋಡ್ಬೇಡಿ ನಿಮಗೆ ಗ್ರಹಚಾರ ಈ ಥರ ಇವನ್ಯಾಕೋ ಆಳೋಕೆ ಬಂದ ಸುಲ್ತಾನು ಇವನೆ ಅಡ್ಡಡ್ಡ ಬಂದ್ರೆ ಶೈತಾನು ಇವನೆ ಹೇಯ್ ಖುದಾ ಝರಾ ದೇಖೋ ದುಷ್ಮನ್ ಗಳೋ ದಾದಾಗಳೋ ಮುಂಬೈಲಿ ಪಬ್ಬು ಗಲ್ಲಿ ಎಲ್ಲೇ ಕೇಳು ಒಂದೇ ಸೌಂಡು ಸಲಾಮ್ ರಾಖಿ ಬಾಯ್…..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here