ಕೆಜಿಎಫ್ ಚಾಪ್ಟರ್ ೧ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಎಬ್ಬಿಸಿದ ಬಿರುಗಾಳಿ ಎಂದಿಗೂ ಮರೆಯಲಾಗದಂತಹುದು. ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಇದು. ಕೆಜಿಎಫ್ ಭಾರತೀಯ ಚಿತ್ರರಂಗ ಸ್ಯಾಂಡಲ್ ವುಡ್ ಕಡೆ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ, ಈ ಸಿನಿಮಾ ಹೊಸ ದಾಖಲೆಗಳನ್ನು ಕೂಡಾ ‌ಮಾಡಿದ್ದು ಇತಿಹಾಸ. ಈ ಒಂದು ಸಿನಿಮಾದ ಮೂಲಕ ಯಶ್ ಅವರು ನ್ಯಾಷನಲ್ ಲೆವೆಲ್ ಸ್ಟಾರ್ ಆಗಿ ಬಿಟ್ಟರು. ಅವರ ಅಭಿಮಾನಿ ಬಳಗ ಕೂಡಾ ಹೆಚ್ಚಿತು. ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೂಡಾ ಈ ಸಿನಿಮಾ ಮೂಲಕ ಪರಭಾಷೆಯವರು ಹುಬ್ಬೇರಿಸುವಂತೆ ಮಾಡಿದರು.

ಮೊದಲ ಸಿನಿಮಾವೇ ಅಷ್ಟೆಲ್ಲಾ ಅಬ್ಬರವನ್ನು ಸೃಷ್ಟಿಸಿದ ಮೇಲೆ ಕೆಜಿಎಫ್ ಚಾಪ್ಟರ್ ೨ ರ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ದುಪ್ಪಟ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ತೆರೆಯ ಮೇಲೆ ಯಾವಾಗ ಸಿನಿಮಾ ಬರಲಿದೆ ಎಂದು ಕಾಯುವಂತೆ ಆಗಿದೆ‌. ಹೀಗೆ ಸಿನಿಮಾ ಬಗ್ಗೆ ಸಾಕಷ್ಟು ಕ್ರೇಜ್ ಇರುವಾಗಲೇ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೆಜಿಎಫ್ ಚಾಪ್ಟರ್ ಎರಡರ ಒಂದು ಹಾಡಿನ ಸಣ್ಣ ಬಿಜಿಎಂ ತುಣುಕನ್ನು ಹಂಚಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ಅವರು ಹಂಚಿಕೊಂಡಿರುವ ಬಿಜಿಎಂ ಮೈ ರೋಮಾಂಚನಗೊಳಿಸುವಂತ ಸಂಗೀತವನ್ನು ಹೊಂದಿದೆ. ಭೀಕರ ಇವ ಭೋರ್ಗರ ಅನ್ನುವ ಪದಗಳನ್ನು ಒಳ ಗೊಂಡಿರುವ ಈ ಬಿಜಿಎಂ ಕೇಳುಗನ ಎದೆ ಝಲ್ಲೆನ್ನುವಂತೆ ಮಾಡಿದೆ. ಈ ಬಿಜಿಎಂ ಅನ್ನು ಈಗಾಗಲೇ ಹದಿನಾರು ಸಾವಿರಕ್ಕಿಂತ ಹೆಚ್ಚಿನ ಜನರು ವೀಕ್ಷಣೆ ಮಾಡಿದ್ದರೆ, 7 ಸಾವಿರಕ್ಕಿಂತ ಅಧಿಕ ಜನರು ಲೈಕ್ ಮಾಡಿದ್ದಾರೆ. ಅಲ್ಲದೆ ಬಿಜಿಎಂ ನೋಡಿ 1500 ಕ್ಕಿಂತ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here