ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹತ್ಯೆಗೆ ಸ್ಕೆಚ್ ನಡೆದಿರುವುದು ಇದೀಗ ಜಗಜ್ಹಾಹೀರಾಗಿದೆ‌.ಎರಡೂ ವರ್ಷದ ಹಿಂದೆ ಮಲ್ಲೇಶ್ವರಂ ಬಳಿ ರಾಕಿಂಗ್ ಯಶ್ ಅವರನ್ನು ಮುಗಿಸಿ ಬಿಡಲು ಸುಫಾರಿ ಕಿಲ್ಲರ್ ಸೈಕಲ್ ರವಿ ಅಲಿಯಾಸ್ ಪೆಡಲ್ ರವಿ ಮತ್ತು ಅವನ ಸ್ನೇಹಿತ ಕೋದಂಡ ಸೇರಿ ಪ್ಲಾನ್ ಮಾಡಿದ್ದರು. ಇದೀಗ ಈ ಮಾಹಿತಿಯನ್ನು ಸ್ವತಃ ಸೈಕಲ್‌ ರವಿ ಸಿಸಿಬಿ ಪೋಲೀಸರ ಮುಂದೆ ಹೇಳಿಕೆ ನೀಡಿರುವುದು ಇದೀಗ ಬಹಿರಂಗವಾಗಿದೆ.

ಇಷ್ಟಕ್ಕೂ ಯಾರು ಈ ಸೈಕಲ್ ರವಿ ? ರಾಕಿಂಗ್ ಸ್ಟಾರ್ ಯಶ್ ಅವರನ್ನು ಮುಗಿಸಲು ಸೈಕಲ್‌ ರವಿಗೆ  ಸುಫಾರಿ ಕೊಟ್ಟಿದ್ದಾದರೂ ಯಾರು ? ಈ ಪ್ರಶ್ನೆಗೆ  ಉತ್ತರ ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಮಾತ್ರ ನಿಗೂಡವಾಗೇ ಇದೆ.ಎರಡು ವರ್ಷದ ಹಿಂದೆ ಶೂಟಿಂಗ್ ಮುಗಿಸಿ ಯಶ್ ಅವರು ತಮ್ಮ ಕಾರಿನಲ್ಲಿ ಮಲ್ಲೇಶ್ವರಂ ಮೂಲಕ ಮೆಜೆಸ್ಟಿಕ್ ಗೆ ತೆರಳಿದ್ದರು.ಆಗ ಅದೇ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಾರಿನ ಮೇಲೆ ಏಕಾಏಕಿ ಒಂದರ ಮೇಲೊಂದು ಕಲ್ಲುಗಳು ತೂರಿ ಬಂದಿವೆ.ಆಗ ಕಾರು ನಿಲ್ಲಿಸುವ ಗೋಜಿಗೆ ಯಶ್ ಹೋಗಿಲ್ಲ.

ಒಂದು ವೇಳೆ ಅಂದು ರಾಕಿಂಗ್ ಸ್ಟಾರ್ ಯಶ್ ಕಾರಿನಿಂದ ಇಳಿದಿದ್ದರೆ ಬಹುಶಃ ಯಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿತ್ತೇನೋ.ಆದರೆ ಅಂದು ಯಶ್ ಜೊತೆಗಿದ್ದ ಬಾಡಿಗಾರ್ಡ್ ಗಳು ಕಾರಿನಿಂದ ಇಳಿಯುವಷ್ಟರಲ್ಲಿ ಸೈಕಲ್ ರವಿ ಅಂಡ್ ಗ್ಯಾಂಗ್ ಎಸ್ಕೇಪ್ ಆಗಿದೆ.ಇಷ್ಟಕ್ಕೂ ಯಶ್ ಮೇಲೆ ಸೈಕಲ್ ರವಿ ಗ್ಯಾಂಗ್ ಅಟಾಕ್ ಮಾಡಲು ಕಾರಣ ಯಾರು ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಇದೀಗ ಸಿಸಿಬಿ ಪೋಲೀಸರ ಬಳಿ ಇದೆ‌.

ಆದರೆ ಸಿಸಿಬಿ ಪೋಲೀಸರು ಆ ವಿಷಯದ ಬಗ್ಗೆ ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ.ಆದರೆ ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ವಿಚಾರಿಸಿದಾಗ ಈ ಘಟನೆ ಎರಡೂವರೆ ವರ್ಷದ ಹಿಂದೆ ನಡೆದದ್ದು ನಿಜ‌.ಆದರೆ ಈಗ ಈ ವಿಷಯದ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯೆ ನೀಡಲಾರೆ.ಯಾಕೆಂದರೆ ಇದೊಂದು ಸೂಕ್ಷ್ಮ ವಿಚಾರ ವಗಿದ್ದು ಇದರ ಬಗ್ಗೆ ಪೋಲೀಸರು ತನಿಕೆ ಮಾಡುತ್ತಾರೆ.ಹೀಗಾಗಿ ಇದರ ಬಗ್ಗೆ ಸದ್ಯಕ್ಕೆ ನಾನು ಏನನ್ನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯಶ್ ತಿಳಿಸಿದ್ದಾರೆ‌ ‌.

ಇನ್ನು ಈ ವಿಷಯ ಗಾಂಧಿನಗರ ಮಂದಿಗೆ ಅಘಾತ ಉಂಂಟುಮಾಡಿದೆ .ಈ ವಿಷಯದ ಬಗ್ಗೆ ಕಲಕೆದ ಎರಡು ವರ್ಷದ ಹಿಂದೆ ಹಾಯ್ ಬೆಂಗಳೂರ್ ಪತ್ರಕೆ ವರದಿ ಪ್ರಕಟ ಮಾಡಿತ್ತು.ಆದರೆ ರಾಕಿಂಗ್ ಸ್ಟಾರ್ ಯಶ್ ಅವರ ಹತ್ಯೆಗೆ ಸುಫಾರಿ ಕೊಟ್ಟವರ ಬಗ್ಗೆ ಸಿಸಿಬಿ ಪೋಲೀಸರು ಮಾತ್ರ ವಿಷಯ ತಿಳಿಸಬೇಕಿದ್ದು ಈ ವಿಷಯ ಯಶ್ ಅವರ ಅಭಿಮಾನಿಗಳು ಮಾತ್ರವಲ್ಲದೇ ಕರ್ನಾಟಕದ ಜನರಿಗೆ ಆತಂಕ ಉಂಟುಮಾಡಿದೆ.

Photos credit :- Yash Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here