ಕಳೆದ ಒಂದೂವರೆ ತಿಂಗಳಿಂದ ಮಂಡ್ಯದಲ್ಲಿ ಸುಮಲತ ಅಂಬರೀಶ್ ಅವರ ಪರ ಚುನಾವಣೆ ಪ್ರಚಾರ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ತಮ್ಮ ಬಹು ನಿರೀಕ್ಷಿತ ಕೆ ಜಿ ಎಫ್ ಭಾಗ ಎರಡು ಚಿತ್ರದ ಚಿತ್ರೀಕರಣಕ್ಕೆ ಹಣಿಯಾಗುತ್ತಿದ್ದಾರೆ. ಕೆ ಜಿ ಎಫ್ ಪಾರ್ಟ್ 2  ಚಿತ್ರದ ಲುಕ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿತ್ತು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ‌.ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸದ್ದು ಮಾಡಿತ್ತು. ಇದೀಗ ಯಶ್ ‘ಕೆಜಿಎಫ್-2’ ಚಿತ್ರಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಅವರ ಫೋಟೋವೊಂದು ರಿಲೀಸ್ ಆಗಿದೆ.

ನಟ ಯಶ್ ‘ಕೆಜಿಎಫ್-2’ ಸಿನಿಮಾದಲ್ಲಿ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳಲ್ಲಿ ಕೂತುಹಲ ಮೂಡಿತ್ತು. ಆದರೆ ಪಾರ್ಟ್-2 ನಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಒಂದು ಝಲಕನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.ಮೊದಲ ಭಾಗದಲ್ಲಿ ಯಶ್ ಗಡ್ಡಧಾರಿಯಾಗಿ ಅಬ್ಬರಿಸಿದ್ದು, ಸಿನಿಮಾದಲ್ಲಿ ಅವರ ಗಡ್ಡಕ್ಕೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಎರಡನೇ ಭಾಗದಲ್ಲಿ ಯಶ್ ಅವತಾರ ಭಯಾನಕವಾಗಿದೆ.

ಈ ಬಿಡುಗಡೆಯಾಗಿರುವ ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಉದ್ದ ದಾಡಿ ಬಿಟ್ಟಿದ್ದು, ಕನ್ನಡಿ ಮುಂದೆ ನಿಂತು ಅವರೇ ಫೋಟೋ ಸೆರೆಹಿಡಿದಿದ್ದಾರೆ. ಈದೀಗ ಈ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.ಸದ್ಯಕ್ಕೆ ರಿಲೀಸ್ ಆಗಿರುವ ಯಶ್ ಅವತಾರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‘ಕೆಜಿಎಫ್-2’ ಶೂಟಿಂಗನ್ನು ಕೆಲವು ದಿನಗಳು ಮುಂದೂಡಲಾಗಿತ್ತು. ಇದೇ ತಿಂಗಳು 13ರಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here