ರಾಕಿಂಗ್ ಸ್ಟಾರ್ ಯಶ್ ಅವರನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿದ್ದ ಪ್ರಶ್ನೆ ಒಂದೇ ಅದು ರಾಕಿಂಗ್ ಸ್ಟಾರ್ ಯಶ್ ಅವರು ಯಾವಾಗ ತಮ್ಮ ಗಡ್ಡ ಕತ್ತಿರುಸುತ್ತಾರೆ ಎಂಬುದು. ರಾಧಿಕಾ ಪಂಡಿತ್ ಸಹ ತಮ್ಮ ಪತಿಯ ಗಡ್ಡದ ಬಗ್ಗೆ ಹೇಳಿಕೆ ನೀಡುತ್ತಿದ್ದರು‌.ಯಾವಾಗ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಗಡ್ಡಕ್ಕೆ ಕತ್ತರಿ ಹಾಕುತ್ತಾರೆ ಎಂಬುದು ಯಶ್ ಅಭಿಮಾನಿಗಳಿಗೂ ಸಹ ಕಾಡುತ್ತಿತ್ತು. ಎರಡು ವರ್ಷದ ಹಿಂದೆ‌ ಬಹುನಿರೀಕ್ಷೆಯ ಪ್ರಶಾಂತ್ ನೀಲ್ ನಿರ್ದೇಶನದ  ಕೆ ಜಿ ಎಫ್ ಚಿತ್ರದ ಸಲುವಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಉದ್ದನೆಯ ಗಡ್ಡ ಬಿಟ್ಟು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಬರೋಬ್ಬರಿ ಎರಡು ವರ್ಷ ತಮ್ಮ ಉದ್ದನೆಯ ಗಡ್ಡ ಮೈಂಟೇನ್ ಮಾಡುವುದು ಸುಲಭದ ವಿಷಯವಾಗಿರಲಿಲ್ಲ. ತಮ್ಮ ಉದ್ದನೆಯ ಗಡ್ಡದ ಬಗ್ಗೆ ಪ್ರತಿದಿನ ಕಾಳಜಿ ವಹಿಸಬೇಕಿತ್ತು. ಉದ್ದನೆಯ ಗಡ್ಡದ ಯಶ್ ಅವರನ್ನು ನೋಡಿ ಸ್ವತಃ ಯಶ್ ಧರ್ಮಪತ್ನಿ ರಾಧಿಕಾ ಪಂಡಿತ್ ಸಹ ಯಾವಾಗ ಯಶ್ ಗಡ್ಡ ತೆಗಿತಾರೆ ಅಂತ ಕಾಯ್ತಾ ಇದಿನಿ‌ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು‌.ಈಗ ತಮ್ಮ ಕನಸಿನ ಕೆ ಜಿ ಎಫ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ.ಹೀಗಾಗಿ ಯಶ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗಿದೆ.

ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪತ್ನಿ ರಧಿಕಾ ಪಂಡಿತ್ ಮತ್ತು ನಿರ್ಮಾಪಕರಾದ ಜಯಣ್ಣ ಅವರ ಎದುರೇ ತಮ್ಮ ಎರಡು ವರ್ಷದ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಮುಂದಿನ ಚಿತ್ರ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕಾಗಿ ಯಶ್ ಅವರು ತಮ್ಮ ಹೊಸ ಲುಕ್ ನಿಂದ ಕಂಗೊಳಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಧಿಕಾ ಪಂಡಿತ್ ಅವರು ಈ ವೀಡಿಯೋ ಮೂಲಕ ಯಶ್ ಅವರ ಗಡ್ಡದ ಬಗ್ಗೆ ಮಾತನಾಡಿದ್ದಾರೆ.ಈ ವೀಡಿಯೋ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here