ಬುಲ್ ಸಿಟ್ , ಬದನೇಕಾಯಿ ಇಲ್ಲದಿರೋದೆಲ್ಲಾ ಅದ್ಯಾವುದೋ ಮಾಧ್ಯಮ ಪ್ರಸಾರ ಮಾಡ್ತಂತೆ , ನಾನು  ಚಿಟ್ ಫಂಡ್ ವ್ಯವಹಾರ ಮಾಡಿದ್ನಂತೆ ಹಾಗಂದ್ರೇನು ಅಂತಾನೆ ಗೊತ್ತಿಲ್ಲ , ಐಟಿ ಅಧಿಕಾರಿಗಳು ನಿಮಗೆ ಮಾಹಿತಿ‌ ಕೊಟ್ಟಿರೋದನ್ನ ಮಾತ್ರ ತೋರಿಸಬೇಕು , ಅದು ಬಿಟ್ಟಿ ಇಲ್ಲದಿರೋದೆಲ್ಲ ಕ್ರಿಯೇಟ್ ಮಾಡಿದ್ರೆ ಜನ ನೋಡ್ತಿರ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ರಾಂಗ್ ಆಗಿದ್ದಾರೆ. ಹೌದು ಕಳೆದ ಮೂರು ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟರ ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿತ್ತು. ಇಂದು ಯಶ್ ಮನೆ ಮೇಲೆ ನಡೆಯುತ್ತಿದ್ದ ದಾಳಿ ಅಂತ್ಯಗೊಂಡಿದೆ‌. ಇಂದು ಮಧ್ಯಾಹ್ನದ ವೇಳೆಗೆ ಯಶ್ ಮನೆಯಲ್ಲಿದ್ದ ಐಟಿ

ಅಧಿಕಾರಿಗಳು ಮನೆಯಿಂದ ತೆರಳಿದ್ದಾರೆ.ಕೇವಲ ಊಹಾಪೋಹಗಳ ಮಾತುಕೇಳಿ ಬರುತ್ತಿದೆ. ಕೆಲವರು ಅಷ್ಟು ಸಿಕ್ತು ಇಷ್ಟು ಸಿಕ್ತು ಅಂತಾ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಆದರೆ ಸತ್ಯಾಂಶವನ್ನು ಅರಿಯದೇ ಬುಲ್ ಷಿಟ್ ಗಳನ್ನು ತೋರಿಸ್ಬಾರ್ದು. ಕೆಲ ಮಾಧ್ಯಮಗಳು ಸ್ವಲ್ಪ ತಿಳಿದುಕೊಂಡು ವರದಿ ಮಾಡ್ಬೇಕು. ಎರಡು ದಿನಗಳಿಂದ ನನಗೆ ನನ್ನ ಹೆಂಡತಿ ಹಾಗೂ ಮಗಳನ್ನ ಬಿಟ್ಟು ಇದ್ದದ್ದು ತುಂಬಾ ಕಷ್ಟವಾಯ್ತು.

ಅಭಿಮಾನಿಗಳಿಗೆ ನನ್ನ ಧನ್ಯವಾದ ಅವರು ಹೊರಗೆ ಇದ್ದರು ಎಂದು ಕೇಳ್ದೆ. ಒಂದು ರಿಕ್ವೆಸ್ಟ್ , ಇಲ್ಲದಿರುವ ಊಹಾಪೋಹಗಳನ್ನು ಹಬ್ಬಿಸಬಾರ್ದು ಅಂತಾ ಹೇಳಿದ್ದಾರೆ.ಇನ್ನು, ಈಗಾಗಲೇ ಯಶ್ ಹಾಗೂ ಮನೆ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಐಟಿ ದಾಳಿ ಬಳಿಕ ಸ್ವಲ್ಪ ವಿಶ್ರಾಂತಿ ಪಡೆದು ಯಶ್ ಅವರು ನಂತರ ಹುಬ್ಬಳ್ಳಿಗೆ ಹೊರಡಲಿದ್ದಾರಂತೆ. ಇಂದು ಬಿಡುಗಡೆಯಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಟನೆಯ ಬಹು ನಿರೀಕ್ಷಿತ ಸಿನಿಮಾ ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು ಜೊತೆ ಭಾಗವಹಿಸಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here