ಇಂದು ಚು‌ನಾವಣಾ ಪ್ರಚಾರಗಳಿಗೆ ತೆರೆ ಬೀಳುವ ದಿನ‌. ಗುರುವಾರ ಚುನಾವಣೆ ಇರುವುದರಿಂದ ಇಂದು ಸಂಜೆ ವೇಳೆಗೆ ಎಲ್ಲಾ ಪ್ರಚಾರ ಕಾರ್ಯಗಳಿಗೆ ಇಂದು ಮುಕ್ತಾಯ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪ್ರಚಾರದ ಕೊನೆಯ ಹಂತವಾಗಿ ಬೃಹತ್ ಸಮಾವೇಶವೊಂದನ್ನು ಆಯೋಜಿಸಲಾಗಿದ್ದು, ಭಾರೀ ಸಂಖ್ಯೆಯ ಜನರು ಅಲ್ಲಿ ಸ್ವಇಚ್ಛೆಯಿಂದ ಸೇರಿದ್ದು , ಅಪಾರ ಸಂಖ್ಯೆಯ ಜನರು ನೆರೆದದ್ದರು, ಈ ಅಪಾರ ಜನಸ್ತೋಮದ ಮುಂದೆ ಮಾತನಾಡಿದ ನಟ ಯಶ್ ಅವರು ವಿರೋಧಿಗಳಿಗೆ ತಮ್ಮ ಮಾತಿನ ಮೂಲಕವೇ ಛಾಟಿ ಏಟನ್ನು ನೀಡಿದ್ದಾರೆ. ಅವರು ವಿರೋಧಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯಶ್ ಮಾತನಾಡುತ್ತಾ ನಾವು ಚುನಾವಣಾ ಪ್ರಚಾರಕ್ಕೆ ಇಳಿದಿದ್ದೇ ತಡ ನಮ್ಮ ಬಗ್ಗೆ ಎಲ್ಲೆಡೆ ಮಾತನಾಡುವವರು ಹುಟ್ಟಿಕೊಂಡಿದ್ದಾರೆ ಎಂದರು. ಎಲ್ಲವನ್ನು ಅಂದರೆ ವಿರೋಧಿಗಳು ಹೇಳುವ ಎಲ್ಲಾ ಮಾತುಗಳನ್ನು ಕೇಳಿ ಕೇಳಿ ಸುಮ್ಮನಿರುವಂತೆ ಹೇಳುತ್ತಿದ್ದರು. ಆದರೆ ಕೆಲವೊಮ್ಮೆ ರಕ್ತ ಕುದಿದಾಗ ನಿಯಂತ್ರಣ ಆಗೋದಿಲ್ಲ ಎಂದಿದ್ದಾರೆ. ಅಲ್ಲದೆ ಯಶದ ಅವರು ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಮಂಡ್ಯದ ನಿಜವಾದ ಗೌಡ ಎಂದು ಹೇಳಿದ್ದಾರೆ. ನಮ್ಮನ್ನು ಸಿನಿಮಾ ಮಂದಿ ಎನ್ನುವ ಅವರು ಏನು? ಅವರ ಅಭ್ಯರ್ಥಿ ಯಾರು? ಎಂದು ಪ್ರಶ್ನಿಸಿದ್ದಾರೆ.

ನಮ್ಮನ್ನು ಸಿನಿಮಾದವರು ಎಂದ ಮಾನ್ಯ ಮುಖ್ಯಮಂತ್ರಿಗಳು ನಿನ್ನೆ ಅವರೇ ನಿರ್ಮಾಪಕರು ಅಂತ ಕೂಡಾ ಹೇಳಿದ್ದಾರೆ. ಏನು ಇದರ ಅರ್ಥ. ಅವರು ಮೊದಲು ಕನ್ಫರ್ಮ್ ಮಾಡಿಕೊಂಡು ಮಾತಾಡಲಿ ಎಂದಿದ್ದಾರೆ. ಕೇವಲ ಚುನಾವಣೆಗೋಸ್ಕರ ಮಾತಾಡೋ ಜನ ನಾವಲ್ಲ , ನಾವು ಯಾವಾಗಲೂ ಒಂದೇ ತರ ಇರ್ತೇವೆ ಅಂದ ಅವರು ನಾನು ಪಂಚ್ ಡೈಲಾಗ್ ಹೇಳೋದಿಲ್ಲ ಎಂದಿದ್ದಾರೆ. ಹೀಗೆ ವಿರೋಧಿಗಳ ಮೇಲೆ ಜರಹಾಯ್ದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here