ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ಇಂದು. ಆದರೆ ಅವರ ಅಂಬರೀಶ್ ಅವರ ನೆನಪಿನಲ್ಲಿ, ಈ‌ ಬಾರಿಯ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿಲ್ಲ ಹಾಗೂ ಅದರ ಬಗ್ಗೆ ಈ ಮೊದಲೇ ಅದರ ಬಗ್ಗೆ ಮಾಹಿತಿಯನ್ನು ಕೂಡಾ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಇದರ ಹೊರತಾಗಿಯೂ ಇಂದು ಅಭಿಮಾನಿಯೊಬ್ಬ ಅವರ ಜನ್ಮದಿನವೆಂದು, ಯಶ್ ರನ್ನು ಭೇಟಿಯಾಗಲೂ ಅವರ ಮನೆ ಬಳಿ ಹೋಗಿದ್ದಾಗ, ಯಶ್ ಸಿಗಲಿಲ್ಲವೆಂದು ಬೇಸರಿಸಿಕೊಂಡು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಾದ್ಯಮಗಳಿಂದ ಈ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ.

ಇದಾದ ನಂತರ ನಟ ಯಶ್ ಅವರು ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಅಲ್ಲಿ ಅಭಿಮಾನಿಯೆಂದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ವ್ಯಕ್ತಿಯ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. ಅದಾದ ಮೇಲೆ ಮಾದ್ಯಮಗಳ ಮುಂದೆ ಮಾತನಾಡಿದ ಅವರು, ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಯಶ್ ಅಭಿಮಾನಿಯಾಗಿದ್ರೆ ನಿಮ್ಮ ದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ಹೇಳಿದ್ದಾರೆ. ಕಳೆದ ಬಾರಿ ಬ್ಯಾನರ್ ಕಟ್ಟಲು ಹೋದಾಗ ಒಬ್ಬರು ಸತ್ತರು. ಅದರಿಂದಲೂ ನನಗೆ ಬೇಸರವಾಗಿದೆ ಎಂದ ಅವರು, ಇಂಥಹ ವಿಷಯಗಳಿಂದ ನನಗೂ ನೋವಾಗುತ್ತೆ ಎಂದು ಅವರು ಹೇಳಿದ್ದಾರೆ.

ಈ ತರಹ ಮಾಡುವವರು ನನ್ನ ಅಭಿಮಾನಿಯೇ ಅಲ್ಲ. ನನ್ನ ಮನಸ್ಸನ್ನು ಕಲ್ಲು ಅನ್ಕೊಂಡ್ರು ಪರವಾಗಿಲ್ಲ. ಇದೆಲ್ಲಾ ಸಿಟ್ಟು ಬರೆಸುವ ಕೆಲಸ ಅಂತ ಅವರು ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಬರ್ತಡೇ ಮಾಡಿದಿದ್ರೆ ಇಂತಹ ಒಂದು ಘಟನೆ ನಡೀತಿರಲಿಲ್ಲ ಅಂದ ಅವರು, ನಮ್ಮನ್ನು ನೋಡಿ ಏನಾದ್ರು ಕಲಿಯೋದಿದ್ರೆ ಕಲೀರಿ, ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಇದೊಂದು ಮರೆಯಕ್ಕೆ ಆಗದೇ ಇರೋ ಒಂದು ಘಟನೆ ಅಂತ ಅವರು ಮಾದ್ಯಮಗಳ ಮುಂದೆ ತಮ್ಮ ಬೇಸರವನ್ನು ವ್ಯಕ್ತಪಡಿಸಿ, ಅಭಿಮಾನಿಯ ಅತಿರೇಕದ ವರ್ತನೆಗೆ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here